ಗುತ್ತಿಗಾರು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಆರಂಭ

0

ಧ್ವಜಾರೋಹಣ, ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಸನ್ಮಾನ

ಸರ್ಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಆಚರಣೆ ಆರಂಭವಾಗಿದ್ದು ಮಾಜಿ ಮಂಡಲ ಪ್ರಧಾನರಾದ ಮುಳಿಯ ತಿಮ್ಮಪ್ಪಯ್ಯ ಇಂದು ಧ್ವಜಾರೋಹಣ ಮಾಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ದಯಾನಂದ ಮುತ್ಲಾಜೆ
ವಹಿಸಿದ್ದರು. ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಭರತ್ ಮುಂಡೋಡಿ, ನಿವೃತ್ತ ಪ್ರಾಂಶುಪಾಲ ಜಿ. ಉಮ್ಮರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪಂಜ ಇದರ ಪ್ರಭಾರ ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ, ನಿವೃತ್ತ ಉಪನ್ಯಾಸ ರಾಮಚಂದ್ರ ಪಳಂಗಾಯ ವೇದಿಕೆಯಲ್ಲಿದ್ದರು. ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಲೊಕೇಶ್ವರ ಡಿ ‘ ಆರ್, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಧ್ಯಕ್ಷ ಮಂಜುನಾಥ ಉಂಞನ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಕೆಂಬಾರೆ ವೇದಿಕೆಯಲ್ಲಿದ್ದರು. ಸಭೆಯಲ್ಲಿ ವಿವಿಧ ಸ್ಪರ್ಧೆಯ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಉಪಾನ್ಯಾಸಕರಿಗೆ ಮತ್ತು ಮುಖ್ಯ ಗುರುಗಳು, ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.


ಮುಖ್ಯೋಪಾಧ್ಯಾಯ ನೆಲ್ಸನ್ ಕ್ಯಾಸ್ಟೊಲಿನೋ ವರದಿ ವಾಚಿಸಿದರು. ಪ್ರಾಂಶುಪಾಲೆ ಚೆನ್ನಮ್ಮ ಸ್ವಾಗತಿಸಿ, ಶಿಕ್ಷಕಿ ಕವಿತಾ ಧನ್ಯವಾದ ಮಾಡಿದರು. ಶಿಕ್ಷಕಿಯರಾದ ಚೈತ್ರ ಹಾಗೂ ಶಿಕ್ಷಕ ರಂಜಿತ್, ಶಿಕ್ಷಕಿ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.