ಮನೆ ನೀಡಿ ಮರಳು ನೀಡದಿದ್ದರೆ ಹೇಗೆ?

0

ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಫಲಾನುಭವಿಗಳ ಅಳಲು

ಅಕ್ರಮ ಮರಳು ಸಾಗಾಟಕ್ಕೆ ಅವಕಾಶವೇ ಇಲ್ಲ : ತಹಶೀಲ್ದಾರ್ ಸೂಚನೆ


ಪಂಚಾಯತ್‌ನಿಂದ ಮನೆ ನೀಡಿ ಈಗ ಮರಳು ಸಿಗದೇ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಆದ್ದರಿಂದ ವಸತಿ ಯೋಜನೆಯ ಫಲಾನುಭವಿಗಳಿಗೆ ಮರಳು ಕೊಂಡುಹೋಗಲು ಅವಕಾಶ ನೀಡಬೇಕೆಂದು ಎಸ್ಸಿ ಎಸ್ಟಿ ಕುಂದು-ಕೊರತೆ ಸಭೆಯಲ್ಲಿ ಅಹವಾಲು ವ್ಯಕ್ತವಾಗಿದೆ.
ಡಿ.೩೧ರಂದು ಸುಳ್ಯ ತಾಲೂಕು ವ್ಯಾಪ್ತಿಯ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಯು ಸುಳ್ಯ ತಾ.ಪಂ. ನ ಸಾಮರ್ಥ್ಯ ಸೌಧದಲ್ಲಿ ನಡೆಯಿತು. ತಹಶೀಲ್ದಾರ್ ಕು| ಅನಿತಾಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಚ್ಚುತ ಮಲ್ಕಜೆಯವರು , 'ಪಂಚಾಯತ್‌ನಿಂದ ಮನೆ ಕೊಟ್ಟಿದ್ದೀರಿ. ಈಗ ಮನೆ ಕಟ್ಟಲು ಮರಳಿನ ಅಭಾವ ಇದೆ. ಏನು ಮಾಡುವುದು ?. ಪಂಚಾಯತ್ ವ್ಯಾಪ್ತಿಯಲ್ಲಿ ಸಿಗುವ ಮರಳನ್ನು ಪಂಚಾಯತ್‌ನಿಂದ ಕೊಡಲ್ಪಟ್ಟ ಮನೆಗೆ ಬಳಸಲು ಅವಕಾಶ ಇರಬೇಕು ಎಂದು ಕೇಳಿದಾಗ, ``ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೆಲ್ಲ ಮರಳು ತೆಗೆಯಲು ಅವಕಾಶ ಇಲ್ಲ. ಅಕ್ರಮ ಮರಳು ಗಾರಿಕೆಗೆ ಕಡಿವಾನ ಹಾಕಲಾಗಿದ್ದು ಅಂತದ್ದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.‘ಮನೆ ಕಟ್ಟುವವರು ಏನು ಮಾಡೋದು?” ಎಂದು ಮತ್ತೆ ಅಚ್ಚುತರು ಪ್ರಶ್ನಿಸಿದಾಗ, ಅನುಮತಿ ಇರುವವರಿಂದ ಮರಳು ಪಡೆಯಿರಿ'' ಎಂದು ತಹಶೀಲ್ದಾರ್ ಹಾಗೂ ಇ.ಒ. ಸೂಚನೆ ನೀಡಿದರು. ಆಲೆಟ್ಟಿ, ಸಂಪಾಜೆ ಇತರೆಡೆಗಳಲ್ಲಿ ಮರಳು ಸಾಗಾಟ ನಡೆಯುತ್ತಿದೆ'' ಎಂದು ಸರಸ್ವತಿ ಬೊಳಿಯಮಜಲು, ಸಂಜಯ್ ಪೈಚಾರು ಹೇಳಿದರು.ಆಲೆಟ್ಟಿಯಲ್ಲಿ ಮರಳು ಸಾಗಾಟವನ್ನು ಪ್ರಶ್ನಿಸಿದರೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮಹಿಳೆಯೊಬ್ಬರು ದೂರಿಕೊಂಡರು. ಈ ಕುರಿತು ಲಿಖಿತ ದೂರು ನೀಡಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ತಹಶೀಲ್ದಾರ್ ಸೂಚನೆ ನೀಡಿದರಲ್ಲದೆ, 'ತಾಲೂಕಿನ ಯಾವುದೇ ಭಾಗದಲ್ಲಿ ಅಕ್ರಮ ಮರಳುಗಾರಿಕೆಗೆ ಅವಕಾಶ ಇಲ್ಲ. ಹಾಗೊಂದು ವೇಳೆ ಮರಳುಗಾರಿಕೆ ಕಂಡು ಬಂದರೆ ನಮಗೆ ಮಾಹಿತಿ ನೀಡಿ ನಾವು ಕ್ರಮ ಕೈಗೊಳ್ಳುತ್ತೇವೆ'' ಎಂದು ಸೂಚನೆ ನೀಡಿದರು. ಬ್ರೋಕರ್ ಹಾವಳಿ : ``ನಿಮ್ಮ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಾರೆಂಬ ಮಾಹಿತಿ ನೀವು ಮಾಧ್ಯಮದಲ್ಲಿ ನೀಡಿದ್ದೀರಿ ಅದು ಏನು?'' ಎಂದು ನಂದರಾಜ ಸಂಕೇಶರು ತಹಶೀಲ್ದಾರ್ ಅನಿತಾಲಕ್ಷ್ಮೀಯವರಲ್ಲಿ ಕೇಳಿದರು.‘ಹಾಗೆ ನಡೆಯುತ್ತಿದೆ ಎಂದು ನನಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಅದನ್ನು ನಾನು ವಿಚಾರಣೆ ನಡೆಸಿzನೆ” ಎಂದಯ ತಹಶೀಲ್ದಾರ್ ಹೇಳಿದರು. ತಾಲೂಕು ಕಚೇರಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾವನ್ನು ಪ್ರತೀ ದಿನ ಪರಿಶೀಲನೆ ನಡೆಸಬೇಕು. ಅಲ್ಲಿ ತಾಲೂಕು ಕಚೇರಿ ಸಿಬ್ಬಂದಿಗಳಿಂದ ಹೆಚ್ಚಿಗೆ ಇರುವುದೇ ಬ್ರೋಕರ್‌ಗಳು ಅದಕ್ಕೆ ಕಡಿವಾಣ ಹಾಕಬೇಕು. ಸಬ್ ರಿಜಿಸ್ಟ್ರಾರ್ ಕಚೇರಿ ಗೆ ಹೋಗಲೇ ಸಾಧ್ಯವಿಲ್ಲದ ಸ್ಥಿತಿ ಇದೆ ಎಂದು ನಂದರಾಜರು ದೂರಿಕೊಂಡರು.


“ನಮ್ಮಲ್ಲಿ ಬ್ರೋಕರ್‌ಗಳಿಗೆ ಅವಕಾಶ ಇಲ್ಲ. ಸಾರ್ವಜನಿಕರೇ ಕಚೇರಿಗೆ ಬಂದು ಕೆಲಸ ಮಾಡಿಸಿಕೊಂಡು ಹೋಗಬೇಕು” ಎಂದು ತಹಶೀಲ್ದಾರ್ ಸಭೆಯಲ್ಲಿ ಹೇಳಿದರು.
ಬಂಗ್ಲೆಗುಡ್ಡೆಯಲ್ಲಿ ಮುಗೇರ ಭವನಕ್ಕೆ ಜಾಗ ನೀಡದೇ ಜೇನು ಸೊಸೈಟಿ ಕಟ್ಟಡಕ್ಕೆ ಜಾಗ ನೀಡಲಾಗಿದೆ ಈ ಕುರಿತು ವಿವರ ನೀಡಬೇಕು ಎಂದು ನಂದರಾಜ ಸಂಕೇಶ ಮೊದಲಾದವರು ಆಗ್ರಹಿಸಿದರು. ಕೆ.ವಿ.ಜಿ. ಕ್ಯಾಂಪಸ್ ರ್‍ಯಾಗಿಂಗ್ ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಯಿತು.