ಆಲೆಟ್ಟಿಪ್ರಾ.ಕೃ.ಪ.ಸ.
ಸಂಘದ ಪ್ರಥಮ ದರ್ಜೆ ಸಹಾಯಕ ಕೆ.ಆನಂದ ಗೌಡ ರವರಿಗೆ ಬೀಳ್ಕೊಡುಗೆ ಸಮಾರಂಭ

0

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ದರ್ಜೆ ಸಹಾಯಕ ಕೆ. ಆನಂದ ಬಿಲ್ಲರಮಜಲು ರವರಿಗೆ ಬೀಳ್ಕೊಡುಗೆ ಸಮಾರಂಭವು ಸಂಘದ ಅಧ್ಯಕ್ಷ ಸುಧಾಕರ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಡಿ.31 ರಂದು ಸಂಘದ ವಜ್ರ ಮಹೋತ್ಸವ ಸಭಾಭವನದಲ್ಲಿ ನಡೆಯಿತು.

ಕೆ‌.ಆನಂದ ರವರು
ಕಳೆದ 28 ವರ್ಷಗಳ ಕಾಲ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಪ್ರಸ್ತುತ ಪ್ರಥಮ ದರ್ಜೆ ಸಹಾಯಕರಾಗಿದ್ದು ವೃತ್ತಿಯಿಂದ ಡಿ.31 ರಂದು ನಿವೃತ್ತಿ ಹೊಂದಿರುತ್ತಾರೆ.
ಬೀಳ್ಕೊಡುಗೆ
ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ನಿರ್ದೇಶಕರಾದ ಜಯಪ್ರಕಾಶ್ ಕುಂಚಡ್ಕ, ಕರುಣಾಕರ ಹಾಸ್ಪಾರೆ, ಹರೀಶ್ ರಂಗತ್ತಮಲೆ, ಎನ್.ಎ.ಗಂಗಾಧರ,
ಸುದರ್ಶನ ಪಾತಿಕಲ್ಲು, ತಂಗವೇಲು ನಾಗಪಟ್ಟಣ, ಶ್ರೀಮತಿ ವೇದಾವತಿ ಆಲೆಟ್ಟಿ, ಸಿ.ಇ.ಒ ದಿನಕರ ಎ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತಿ ಗೊಂಡ ಕೆ.ಆನಂದ ಮತ್ತು ಶ್ರೀಮತಿ ಸತ್ಯವತಿ ದಂಪತಿಯವರನ್ನು ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಫಲಪುಷ್ಪ, ಸನ್ಮಾನ ಪತ್ರ ಹಾಗೂ ಚಿನ್ನದ ಉಂಗುರ ನೀಡಿ ಸನ್ಮಾನಿಸಲಾಯಿತು.


ಸಿಬ್ಬಂದಿ ಶ್ರೀಮತಿ ಶಕುಂತಲಾ ಸನ್ಮಾನ ಪತ್ರ ವಾಚಿಸಿದರು.
ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕ ಅಭಿಮಾನಿಗಳು ಹಾರಾರ್ಪಣೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಮರಣ ಸಾಂತ್ವನ ನಿಧಿಗೆ ರೂ. 10,000/- ಚೆಕ್ ನ್ನು ಕೆ. ಆನಂದ ರವರು ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಪ್ರಾಸ್ತಾವಿಕ ಮಾತನಾಡಿದರು. ಜಯಪ್ರಕಾಶ್ ಕುಂಚಡ್ಕ, ಕರುಣಾಕರ ಹಾಸ್ಪಾರೆ, ಸುಧಾಮ ಆಲೆಟ್ಟಿ, ಯತಿರಾಜ್ ಭೂತಕಲ್ಲು‌ ರವರು ಶುಭ ಹಾರೈಸಿದರು.
ಸಿಬ್ಬಂದಿ ಪ್ರವೀಣ್ ಆಲೆಟ್ಟಿ ಪ್ರಾರ್ಥಿಸಿದರು. ಸಿ.ಇ.ಒ ದಿನಕರ ಎ ಸ್ವಾಗತಿಸಿದರು. ಸುದರ್ಶನ ಪಾತಿಕಲ್ಲು ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.
ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ಆಹ್ವಾನಿತ ಬಂಧು ಮಿತ್ರರು ಆಗಮಿಸಿದ್ದರು.
ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.