ಜ.10ರಂದು ಕಲ್ಚೆರ್ಪೆಯಲ್ಲಿ ಬರ್ನಿಂಗ್ ಮೆಷಿನ್ ಉದ್ಘಾಟನೆ

0

ಜ.13ರಂದು ಸುಳ್ಯದಲ್ಲಿ ಮೀನುಗಾರಿಕಾ ಕಾರ್ಯಾಗಾರ

ಜ.18ರಂದು ಬೆಳ್ಳಾರೆ ಕೆ.ಪಿ.ಎಸ್. ನೂತನ ಕಟ್ಟಡ ಉದ್ಘಾಟನೆ

ಸುಳ್ಯ ನಗರ ಪಂಚಾಯತ್‌ನ ಕಸ ವಿಲೇವಾರಿ ಘಟಕ ಕಲ್ಚರ್ಪೆಯಲ್ಲಿ ತ್ಯಾಜ್ಯವನ್ನು ಉರಿಸಲು ಸ್ಥಾಪಿಸಲಾಗಿರುವ ಬರ್ನಿಂಗ್‌ ಮೆಷಿನ್‌ನ ಉದ್ಘಾಟನೆ ಜ.10ರಂದು ನಡೆಯಲಿದೆ ಎಂದು ಬಂದರು, ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಡಿ.31ರಂದು ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೂ.10 ಗಂಟೆಗೆ ಗ್ಯಾಸಿಫಿಕೇಷನ್ ಯಂತ್ರದ ಉದ್ಘಾಟನೆ ನಡೆಯಲಿದೆ. ಬಳಿಕ 10.30ಕ್ಕೆ 110 ಕೆ.ವಿ.ಸಬ್ ಸ್ಟೇಷನ್ ಶಂಕುಸ್ಥಾಪನೆ ನಡೆಯಲಿದೆ. 12.30ಕ್ಕೆ ಪೆರುವಾಜೆ ಡಾ.ಶಿವರಾಮ ಕಾರಂತ ಕಾಲೇಜಿನಲ್ಲಿ ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಹೊಸ ಗ್ರಂಥಾಲಯದ ಉದ್ಘಾಟನೆ ನಡೆಯಲಿದೆ. ಇಂಧನ ಹಾಗು ಕನ್ನಡ‌ ಸಂಸ್ಕೃತಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ.

ಜ.13 ರಂದು ಮೀನುಗಾರಿಕಾ ಕಾರ್ಯಾಗಾರ:
ಜನವರಿ 13 ರಂದು ಒಂದು ದಿನದ ಒಳನಾಡು ಮೀನುಗಾರಿಕಾ‌ ಕಾರ್ಯಾಗಾರ ಕೊಡಿಯಲಾಲಬೈಲು ಗೌಡ ಸಮುದಾಯಭವನದಲ್ಲಿ ನಡೆಯಲಿದೆ. ಮೀನಿನ ವಿವಿಧ ಉಪಯೋಗಗಳ ಬಗ್ಗೆ, ಮೀನು‌ ಸಾಕಾಣಿಕೆಯ ವಿಧದ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಲಾಗುವುದು. 24 ಕ್ಕೂ ಹೆಚ್ಚು ಆಹಾರಗಳ ತಯಾರಿಕೆಯ ಬಗ್ಗೆ, ಎಣ್ಣೆ, ಗೊಬ್ಬರ, ಬಯೋ ಡೀಸಿಲ್ ತಯಾರಿಕೆ ಸೇರಿ ಮೀನಿನ ಕೃಷಿಯ ಬಗ್ಗೆ ಮಾಹಿತಿ ನೀಡಲಾಗುವುದು.‌ ಮೀನು ಸಾಕಾಣಿಕೆ ಮೀನು ಮರಿಗಳ ವಿತರಣೆ ಯೂ ನಡೆಯಲಿದೆ ಎಂದು ಅವರು ತಿಳಿಸಿದರು.

ಜ.18 ರಂದು ಬೆಳ್ಳಾರೆ‌ ಕೆಪಿಎಸ್‌ಸಿ ನೂತನ ಕಟ್ಟಡ ಉದ್ಘಾಟನೆ:
ಜ.18 ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಸುಳ್ಯ ತಾಲೂಕಿಗೆ ಭೇಟಿ ನೀಡಲಿದ್ದಾರೆ. ಅಂದು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ‌ ಉದ್ಘಾಟನೆ ನಡೆಯಲಿದೆ ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ
ನಿಯಮಿತ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಕಾಮತ್, ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಗಂಗಾಧರ ಕೆ.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಬಿಜೆಪಿ ಮಂಡಲ‌‌ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಉಪಸ್ಥಿತರಿದ್ದರು