ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗಪಟುಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಶ್ರೀ ಸಿದ್ಧಗಂಗಾ ಯೋಗ ತರಬೇತಿ ಕೇಂದ್ರ ಮತ್ತು ವರ್ಷಿಣಿ ಯೋಗ ಎಜುಕೇಶನ್ ಸಂಸ್ಕೃತಿ ಮತ್ತು ಸ್ಪೋರ್ಟ್ಸ್ ಟ್ರಸ್ಟ್ ನ‌ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆ-2022 ರಲ್ಲಿ 8 ರಿಂದ 10 ವರ್ಷದ ಬಾಲಕಿಯರ ವಿಭಾಗದಲ್ಲಿ ಸೋನಾ ಅಡ್ಕಾರ್ ಪ್ರಥಮ ಸ್ಥಾನ, ಹಾರ್ದಿಕ ಕೆರೆಕ್ಕೋಡಿ ದ್ವಿತೀಯ ಸ್ಥಾನ ಮತ್ತು 11 ರಿಂದ 15 ವರ್ಷದ ಬಾಲಕರ ವಿಭಾಗದಲ್ಲಿ ತನುಷ್ ಕೆ. ಆರ್ ಪ್ರಥಮ ಸ್ಥಾನ, ತನುಷ್ ಎಂ. ಹೆಚ್ ತೃತೀಯ ಸ್ಥಾನ
ಹಂಶಿತ್ ಅಡ್ಕಾರ್ ಪಂಚಮ ಸ್ಥಾನ ಹಾಗೂ 21 ರಿಂದ 30 ವರ್ಷದ ಮಹಿಳೆಯರ ವಿಭಾಗದಲ್ಲಿ ಪ್ರಶ್ವಿಜಾ ಸಂತೋಷ್ ಪ್ರಥಮ ಸ್ಥಾನವನ್ನು ಪಡೆದು ಜನವರಿ 16 ರಿಂದ 19 ರವರೆಗೆ ಅಂಡಮಾನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಇವರು ಯೋಗೇನ ಚಿತ್ತಸ್ಯ ಯೋಗ ತಂಡದ ಯೋಗ ಗುರುಗಳಾದ ಸಂತೋಷ್ ಮುಂಡಕಜೆ ಇವರ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ.