ತೊಡಿಕಾನ ಶಾಲಾ ವಾರ್ಷಿಕೋತ್ಸವ – ವಿವಿಧ ಕಾಮಗಾರಿಗಳ ಉದ್ಘಾಟನೆ

0

ತೊಡಿಕಾನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ದ. 30 ರಂದು ನಡೆಯಿತು.


ಶಾಲಾ ಪ್ರವೇಶ ದ್ವಾರವನ್ನು ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಉದ್ಘಾಟಿಸಿದರು. ನೂತನವಾಗಿ ನಿರ್ಮಿಸಲಾದ ಧ್ವಜ ಸ್ತಂಭವನ್ನು ತೊಡಿಕಾನ ಹಾಲು ಸೊಸೈಟಿ ಅಧ್ಯಕ್ಷೆ ಪ್ರೇಮ ವಸಂತ ಭಟ್ ಉದ್ಘಾಟಿಸಿದರು. ದಾಸ್ತಾನು ಕೊಠಡಿಯನ್ನು ಪ್ರಗತಿಪರ ಕೃಷಿಕ ಕೇಶವ ಪ್ರಸಾದ್ ತೊಡಿಕಾನ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅನುದಾನದಡಿ ರಚಿಸಲಾದ ಮೇಲ್ಛಾವಣಿಯನ್ನು ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ಉದ್ಘಾಟಿಸಿದರು.

ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಹರಿಣಿ ದೇರಾಜೆ ಉದ್ಘಾಟಿಸಿದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರಾದ ರವೀಂದ್ರ ಪಂಜಿಕೋಡಿ , ಭವಾನಿ ಚಿಟ್ಟನ್ನೂರು , ಉಷಾ ಅಡ್ಯಡ್ಕ , ಶಶಿಧರ ದೊಡ್ಡಕುಮೇರಿ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಚಿದಾನಂದ ಅಡ್ತಲೆ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ಐತ್ತಪ್ಪ ಬಾಜಿನಡ್ಕ , ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸೌಮ್ಯ ಭಟ್ ವೇದಿಕೆಯಲ್ಲಿದ್ದರು.


ಈ ಸಂದರ್ಭದಲ್ಲಿ ಶಾಲಾ ಪ್ರವೇಶ ದ್ವಾರದ ದಾನಿ ಸಂತೋಷ್ ಕುತ್ತಮೊಟ್ಟೆ, ಧ್ವಜಸ್ತಂಭದ ದಾನಿಗಳಾದ ಪ್ರೇಮ ವಸಂತ ಭಟ್ ಹಾಗೂ ದಾಸ್ತಾನು ಕೊಠಡಿ ದಾನಿಗಳಾದ ಕೇಶವ ಪ್ರಸಾದ್ ರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ವಾರ್ಷಿಕೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ, ಪೋಷಕರಿಗೆ ವಿವಿಧ ಸ್ಪರ್ಧೆಗಳು ನಡೆದು ಅದರ ಬಹುಮಾನ ವಿತರಿಸಲಾಯಿತು.


ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ , ಸಹಶಿಕ್ಷಕರಾದ ಸುನೀತಾ , ಸ್ನೇಹಲತಾ , ಬಾಲರಾಜ್ , ಪ್ರಿಯಾಂಕ , ಗೌರವ ಶಿಕ್ಷಕರಾದ ನಾಗವೇಣಿ , ವಿದ್ಯಾ , ಎಸ್ ಡಿಎಂಸಿ ಪದಾಧಿಕಾರಿಗಳು , ಶಾಲಾ ಪೋಷಕರು ಸಹಕರಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ , ಪೆತ್ತಾಜೆ ಕಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಂದ , ಪೋಷಕರಿಂದ ಹಾಗೂ ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.