ಅಡಿಕೆ ಕೃಷಿಯ ಕುರಿತು ಲಘುವಾಗಿ‌ ಮಾತನಾಡಿದ ಗೃಹ ಸಚಿವರ ಹೇಳಿಕೆ ಖಂಡನೀಯ : ಜೆಡಿಎಸ್

0

ಕರ್ನಾಟಕದ ಸರಕಾರದ ಗೃಹ ಸಚಿವರಾದ ಆರಗ ಜ್ಞಾನೇಂದ್ರರವರು ಅಡಿಕೆ ಕೃಷಿ ಬಗ್ಗೆ ಲಘುವಾಗಿ ಮಾತನಾಡಿ ರುವುದು ಖಂಡನೀಯ.
ಕೃಷಿಕರನ್ನ ಪ್ರೋತ್ಸಾಹಿಸುವ ಬದಲಾಗಿ ಕಡೆಗಣಿಸುವ ಸಚಿವರ ಮನಸ್ಥಿತಿ ಕೃಷಿಕ ರಲ್ಲಿ ಬೇಸರ ತಂದಿದೆ. ಅಡಿಕೆ ಕೃಷಿಕರು ಈಗಾಗಲೇ ಕಾರ್ಮಿಕ ಬವಣೆ, ಹಳದಿರೋಗ, ಎಲೆಚುಕ್ಕಿ ರೋಗ, ಹಾಗೂ ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದಾರೆ. ಈ ಸಂದರ್ಭದಲ್ಲಿ ಸಚಿವರು ಆಡಿದ ಮಾತುಗಳು ನಿಜವಾಗಿಯೂ ಖಂಡನಾಹ೯ವಾಗಿರುತ್ತದೆ. ಕೇಂದ್ರ ಸರ್ಕಾರದ ಅಡಿಕೆ ಆಮದು ನೀತಿ ಹಾಗು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಯನ್ನು ಸುಳ್ಯ ತಾಲೂಕು ಜನತಾದಳ ತೀವ್ರ ವಾಗಿ ಖಂಡಿಸುತ್ತದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಹಾಗೂ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.