ಜ. 2 ; ಮುರುಳ್ಯ- ಎಣ್ಮೂರು ಸಹಕಾರಿ ಸಂಘದಲ್ಲಿ ಎಲೆಚುಕ್ಕಿ, ಹಳದಿ ಎಲೆ ರೋಗ ಮತ್ತು ಸಮಗ್ರ ನಿರ್ವಹಣೆ ಮಾಹಿತಿ ಕಾರ್ಯಕ್ರಮ

0


ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಂತಿ ಕಲ್ಲು ಹಾಗೂ ಓರಿಯಂಟಲ್ ಕಿಸಾನ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಮತ್ತು ಎನ್.ಸಿ.ಡಿ.ಎಫ್. ಇದರ ಸಹಯೋಗದಲ್ಲಿ ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕಿ ರೋಗ ಹಳದಿ ಎಲೆ ರೋಗ ಮತ್ತು ಸಮಗ್ರ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ ಜನವರಿ 2ರಂದು ಅಪರಾಹ್ಮ 2.30ಕ್ಕೆ ಸಂಘದ ಸಭಾಭವನದಲ್ಲಿ ನಡೆಯಲಿದೆ ಒಕ್ಸಕೊ ಸಹಕಾರಿಯ ಮುಖ್ಯ ತಾಂತ್ರಿಕ ಅಧಿಕಾರಿ ಚಂದ್ರಶೇಖರ ಬಿ
. ವಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಮುರುಳ್ಯ-ಎಣ್ಮೂರು ಸಹಕಾರಿ ಸಂಘದ ಅಧ್ಯಕ್ಷ ವಸಂತ ಗೌಡ ಹುದೇರಿ, ಉಪಾಧ್ಯಕ್ಷೆ ಕುಸುಮಾವತಿ ರೈ ಕೆ.ಜಿ. ಒಕ್ಸಕೊ ಸಹಕಾರಿಯ ಅಧ್ಯಕ್ಷರಾದ ಅಮರ್ ಆರ್ .ಮುರುಳ್ಯ-ಎಣ್ಮೂರು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದನಂದ ರೈ ಎನ್., ಎನ್‌ಸಿಡಿಎಫ್ ವಲಯ ಮುಖ್ಯಸ್ಥರಾದ ಶ್ರೀಮತಿ ಸಾಧನ ಜೆ.ಶೆಟ್ಟಿ ಉಪಸ್ಥಿತರಿರುತ್ತಾರೆ. ಸಂಘದ ಸದಸ್ಯರು ,ಸಾರ್ವಜನಿಕರು ಭಾಗವಹಿಸಿ ಎಲೆಚುಕ್ಕಿ ,ಹಳದಿ ಎಲೆ ರೋಗ ಮತ್ತು ಸಮಗ್ರ ನಿರ್ವಹಣೆಯ ಮಾಹಿತಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂಘದ ಪ್ರಕಟಣೆ ತಿಳಿಸಿದೆ.