ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಪ್ರತಿಭಾ ದಿನೋತ್ಸವ

0

ಮುರುಳ್ಯ ಶಾಂತಿನಗರ ಶಾಲೆಯಲ್ಲಿ 2022-23ನೇ ಸಾಲಿನ ಪ್ರತಿಭಾ ದಿನೋತ್ಸವ ಡಿ. 31ರಂದು ನಡೆಯಿತು. ಮುರುಳ್ಯ ಗ್ರಾ.ಪಂ.‌ ಅಧ್ಯಕ್ಷೆ ಕು. ಜಾನಕಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶ್ರೀಮತಿ ನೀಲಮ್ಮರವರ ಸ್ಮರಣಾರ್ಥ ಶಾಲೆಗೆ ಕೊಡುಗೆಯಾಗಿ ನೀಡಿದ ಜಾರುಬಂಡಿ ಮತ್ತು ಸೀಸಾ, ಮುರುಳ್ಯ ಪ್ರಾಥಮಿಕ ಕೃಷಿ ಮತ್ತು ಸಹಕಾರಿ ಸಂಘದ ವತಿಯಿಂದ ನೀಡಿದ ಉದ್ದ ಜಿಗಿದ ಅಂಕಣ ಮತ್ತು ನಿರ್ಮಲ ಹನಿಗುಂಡಿಯವರು ನೀಡಿದ ತ್ರೋಬಾಲ್ ಕಂಬವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ಜಾರುಬಂಡಿ ಮತ್ತು ಸೀಸಾ ದಾನಿಗಳಾದ ನ್ಯಾಯವಾದಿ ಜಗದೀಶ ಹುದೇರಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುರುಳ್ಯ ಗ್ರಾ. ಪಂ. ಉಪಾಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ, ಸದಸ್ಯರಾದ ಶೀಲಾವತಿ ಗೋಳ್ತಿಲ, ಮುರುಳ್ಯ ಎಣ್ಮೂರು ಪ್ರಾ. ಕೃ. ಪ. ಸಹಕಾರಿ ಸಂಘದ ಅಧ್ಯಕ್ಷ ವಸಂತ ಹುದೇರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ, ಮುರುಳ್ಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಕು. ಭಾಗೀರಥಿ ಮುರುಳ್ಯ, ಶಿಕ್ಷಣ ಸಂಯೋಜಕಿ ಸಂಧ್ಯಾ ಕುಮಾರಿ, ಸಿಆರ್‌ಪಿ ಜಯಂತ, ಮ್ಯಾಲಪ್ಪ, ಶಿವಪ್ಪಗೌಡ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ನಡುಬೈಲು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಸರೋಜಿನಿ ಕೆ, ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ನಡುಬೈಲು, ಮುಖ್ಯ ಶಿಕ್ಷಕಿ ಪದ್ಮಾವತಿ, ಶಾಲಾ ನಾಯಕ ಪ್ರಥಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ನಡುಬೈಲು ಸ್ವಾಗತಿಸಿ ಸರೋಜಿನಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಶಿಕ್ಷಕಿ ಪದ್ಮಾವತಿ ವರದಿ ವಾಚಿಸಿದರು. ಅತಿಥಿ ಶಿಕ್ಷಕಿ ಸುಚಿತ ಬಹುಮಾನ ವಿಜೇತರ ಪಟ್ಟಿ ಓದಿದರು. ಗೌರವ ಶಿಕ್ಷಕಿ ಶಾಲಿನಿ ದತ್ತನಿಧಿ ವಿತರಕರ ಪಟ್ಟಿ ಓದಿದರು. ಶಿಕ್ಷಕಿ ಪ್ರೇಮಲತಾ ವಂದಿಸಿದರು. ಅತಿಥಿ ಶಿಕ್ಷಕಿ ಶ್ರೀಮತಿ ಸರಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ಊರಿನವರು ಭಾಗವಹಿಸಿದ್ದರು.