ಚೆಂಬು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ದೇಜಮ್ಮ ನಿವೃತ್ತಿ

0

ಚೆಂಬು ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ದೇಜಪ್ಪ ರವರು ಡಿ.31 ರಂದು ವೃತ್ತಿಯಿಂದ ನಿವೃತ್ತರಾದರು. ಇವರ ಚೆಂಬು ಪ್ರೌಢ ಶಾಲೆಯಲ್ಲಿ 7 ವರ್ಷಗಳ ಕಾಲ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಚೆಂಬು ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸರ್ವತೋಮುಖ ಬಳೆವಣಿಗೆಗಾಗಿ ಶ್ರಮಿಸಿದರು. ಇದರಿಂದಾಗಿ ಚೆಂಬು ಪ್ರೌಢ ಶಾಲೆಯು ಸತತವಾಗಿ 5 ವರ್ಷಗಳ ಶೇ.1೦೦ ಫಲಿತಾಂಶ ಪಡೆದಿರುತ್ತಾರೆ.

ದೇಜಮ್ಮ ರವರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ವಿಟ್ಲ ದೇರಾಜೆಯ ದಿ.ಸುಬ್ಬಣ್ಣ ಗೌಡ ಮತ್ತು ವೀರಮ್ಮ ದಂಪತಿಗಳ ಪುತ್ರಿ ಬಿ.ಎಸ್ಸಿ ಪದವೀಧರೆ. ಇವರು ೧೯೯೧ ರಲ್ಲಿ ಚೆಂಬು ಗ್ರಾಮದ ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್, ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಾಸುದೇವ ಕಟ್ಟೆಮನೆ ಯವರ ಪತ್ನಿ. ಇವರಿಗೆ ೨ ಪುತ್ರಿಯರು ಅಮೃತ ಕೆ.ವಿ., ಎಂ.ಬಿ.ಎ ಎಂ.ಎ ಸ್ನಾತಕೋತ್ತರ ಪದವಿ ಪಡೆದು ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಿರಿಯ ಮಗಳು ಅಪೂರ್ವ ಕೆ.ವಿ, ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಪ್ರಸ್ತುತ ಇವರು ಪತಿ ವಾಸುದೇವರೊಂದಿಗೆ ಕಲ್ಲುಗುಂಡಿಯ ಚೆಟ್ಟೆಕಲ್ಲು ನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಶಿಕ್ಷಣ ಇಲಾಝೆ ಕೊಡಗು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.