ಜ.5,6 : ಕಳಂಜದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಏಕಾಹ ಭಜನೆ

0

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಕಳಂಜ ವತಿಯಿಂದ 25 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಏಕಾಹ ಭಜನೆ ಜ.5 ಮತ್ತು ಜ.6 ರಂದು ನಡೆಯಲಿದೆ.
ಏಕಾಹ ಭಜನೆ ಜ.5 ಗುರುವಾರ ಸೂರ್ಯಾಸ್ತದಿಂದ ಜ.6 ಶುಕ್ರವಾರ ಸೂರ್ಯಾಸ್ತದವರೆಗೆ ನಡೆಯಲಿದೆ.
ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಜ.6 ರಂದು ಸಾಯಂಕಾಲ ಗಂಟೆ 6.30 ರಿಂದ ಬೆಳ್ತಂಗಡಿ ಮಾಯ ಬೆಳಾಲು ಮಾಯ ಮಹೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಮಹಾವಿಷ್ಣು ಮಕ್ಕಳ ಭಜನಾ ತಂಡ ಕಳಂಜ ಇವರಿಂದ ನೃತ್ಯ ಭಜನೆ ನಡೆಯಲಿದೆ.
ರಾತ್ರಿ ಗಂಟೆ 8.30 ಕ್ಕೆ ಶ್ರೀ ಸತ್ಯನಾರಾಯಣ ದೇವರಿಗೆ ಮಹಾಮಂಗಳಾರತಿ,ಗಂಟೆ 9.00 ರಿಂದ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.