ಸುಳ್ಯ ಬ್ರಹ್ಮರಗಯ ಧರ್ಮಶಾಸ್ತಾವು ಅಯ್ಯಪ್ಪ ದೇವಸ್ಥಾನದಲ್ಲಿ 45 ನೇ ವರ್ಷದ ದೀಪೋತ್ಸವ ಮತ್ತು ರಂಗಪೂಜೆ

0

ಸುಳ್ಯ ಕಸಬಾದ ಕೊಡಿಯಾಲಬೈಲು ಶ್ರೀ ಕ್ಷೇತ್ರ ಬ್ರಹ್ಮರಗಯ ಶ್ರೀ ಧರ್ಮಶಾಸ್ತಾವು ಅಯ್ಯಪ್ಪ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ 45 ನೇ ವರ್ಷದ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಮತ್ತು ರಂಗಪೂಜೆಯು ಜ.1 ರಂದು ಜರುಗಿತು.

ಡಿ.26 ರಂದು ಬೆಳಗ್ಗೆ ಧ್ವಜಾರೋಹಣವಾಯಿತು. ಜ.1 ರಂದು ಬೆಳಗ್ಗೆ 18 ತೆಂಗಿನ ಕಾಯಿ ಗಣಪತಿ ಹವನ ಬಳಿಕ ಕೊಪ್ಪರಿಗೆ ಮುಹೂರ್ತ ವಾಗಿ ಸೀಯಾಳಾಭಿಷೇಕವಾಗಿ ನವಕ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯಾಯಿತು.

ಸಂಜೆ ದೀಪಾರಾಧನೆಯಾಗಿ ಭಜನಾ ಕಾರ್ಯಕ್ರಮ ನಡೆದು ರಾತ್ರಿ ವಿಶೇಷವಾಗಿ ರಂಗಪೂಜೆ ಮಹೋತ್ಸವ ನಡೆಯಿತು. ಊರ ಪರ ಊರಿನ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಸಮಿತಿಯ ಅಧ್ಯಕ್ಷ ಗಣೇಶ್ ಪೈಚಾರು ಹಾಗೂ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.