ಸುಬ್ರಹ್ಮಣ್ಯ: ಭಕ್ತಿ ಸಂಭ್ರಮದ ಶ್ರೀ ಅಯ್ಯಪ್ಪಸ್ವಾಮಿ ದೀಪೋತ್ಸವ

0

ಅಖಿಲ ಭಾರತ ಶ್ರೀ ಅಯ್ಯಪ್ಪ ಸೇವಾ ಸಂಘ ಸುಬ್ರಹ್ಮಣ್ಯ ಮತ್ತು ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ಹದಿನಾಲ್ಕನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಭಕ್ತಿ ಸಂಭ್ರಮದಿಂದ ಉಮೇಶ್ ಗುರುಸ್ವಾಮಿಗಳ ನೇತೃತ್ವದಲ್ಲಿ ಶನಿವಾರ ರಾತ್ರಿ ಜರುಗಿತು.

ಈ ಪ್ರಯುಕ್ತ ಬೆಳಗ್ಗೆ ಶ್ರೀ ಗಣಪತಿ ಹೋಮ ನಡೆಯಿತು.ಮದ್ಯಾಹ್ನ ಅನ್ನದಾನ ಸೇವೆ ನೆರವೇರಿತು. ಸಂಜೆ ಕಪಿಲೇಶ್ವರ ಸಿಂಗಾರಿ ಮೇಳದ ಸದಸ್ಯರಿಂದ ಸದಸ್ಯರಿಂದ ಸಿಂಗಾರಿ ಮೇಳ ಜರುಗಿತು. ಸಂಘದ ಸುಮಾರು ೨೦ಕ್ಕೂ ಅಧಿಕ ಕಲಾವಿದರ ತಂಡದಿಂದ ಆಕರ್ಷಕ ಚೆಂಡೆ ನೃತ್ಯ ಪ್ರದರ್ಶಿತವಾಯಿತು.ನಂತರ ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಒಗ್ಗು ನೇತೃತ್ವದಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ತಂಡ ಮತ್ತು ಮರ್ದಾಳದ ಮಹಾಲಿಂಗೇಶ್ವರ ಭಜನಾ ಮಂಡಳಿ ಮತ್ತು ಕಾರ್ತಿಕೇಯ ಭಜನಾ ಮಂಡಳಿ ನೇಲಡ್ಕದ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ ನೆರವೇರಿತು. ಬಳಿP ಸುಬ್ರಹ್ಮಣ್ಯ ಪಾಲ್ತಾಡು ಮತ್ತು ಪ್ರಭಾಕ ಪಡ್ರೆ ನೇತೃತ್ವದಲ್ಲಿ ಶ್ರೀ ದುರ್ಗಾಪರಮೆಶ್ವರಿ ಭಜನಾ ಮಂಡಳಿ ಮರಕತ ಇವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ತದನಂತರ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಮೆರವಣಿಗೆಯು ಜರುಗಿತು.


ಮೆರವಣಿಗೆಯು ಕಾಶಿಕಟ್ಟೆಯಾಗಿ, ಶ್ರೀ ದೇವಳದ ರಥಬೀದಿ ಮೂಲಕ ಸಾಗಿ ಬಂದು ಸವಾರಿ ಮಂಟಪದಲ್ಲಿ ಸಮಾಪ್ತಿಯಾಯಿತು. ಮೆರವಣಿಗೆ ಯುದ್ದಕ್ಕೂ ಸಿಡಿಮದ್ದು ಪ್ರದರ್ಶನ ಹಾಗೂ ಚೆಂಡೆ ಕಲಾವಿದರಿಂದ ಸಿಂಗಾರಿ ಮೇಳ,ಕುಣಿತ ಭಜನೆ ವಿಶೇಷ ಆಕರ್ಷಣೆಯವಾಗಿತ್ತು.ಮೆರವಣಿಗೆಯಲ್ಲಿ ಸುಬ್ರಹ್ಮಣ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ದೀಪ ಹಿಡಿದು ಮುಂದೆ ಸಾಗಿದರು. ಮೆರವಣಿಗೆಯಲ್ಲಿ ಗುರುಸ್ವಾಮಿ ಉಮೇಶ್ ಕೆ.ಎನ್ ಭಕ್ತಾಧಿಗಳಿಗೆ ಪ್ರಸಾದ ವಿತರಿಸಿದರು. ಭಕ್ತಾಧಿಗಳು ಶ್ರೀ ದೇವರಿಗೆ ಹೂ,ಹಣ್ಣು, ಆರತಿ ನೀಡಿ ಪ್ರಸಾದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಅಯ್ಯಪ್ಪ ದೀಪೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಗುರುಸ್ವಾಮಿ,, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್, ಸುಬ್ರಹ್ಮಣ್ಯದ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ, ಹಿರಿಯರಾದ ಶಿವರಾಮ ಗುರುಸ್ವಾಮಿ, ರಾಧಾಕೃಷ್ಣ ಗುರುಸ್ವಾಮಿ,ಶೀನಪ್ಪ ಗುರುಸ್ವಾಮಿ, ಬಸವನಮೂಲೆ ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂಧ, ಪೂರ್ವಾಧ್ಯಕ್ಷರಾದ ಲೋಕೇಶ್ ಬಿ.ಎನ್, ಶಿವರಾಮ.ಕೆ, ವೆಂಕಟೇಶ್ ಎಚ್.ಎಲ್, ಕಾರ್ಯದರ್ಶಿಗಳಾದ ಪ್ರಸನ್ನ ನೂಚಿಲ, ಸುಹಾಸ್ ಎಚ್ ಎಲ್, ಜತೆ ಕಾರ್ಯದರ್ಶಿ ಮಂಜು ಸ್ವಾಮಿ, ಪದ್ಮನಾಭ ಸ್ವಾಮಿಪ್ರಧಾನ ಸಂಚಾಲಕರಾದ ಮಹೇಶ್ ದೇವರಗದ್ದೆ, ಮನೋಜ್ ಕೈಕಂಬ, ಮಹಾಬಲೇಶ್ವರ ದೋಳ, ದೀಪಕ್ ನಂಬಿಯಾರ್,ಶೇಷಕುಮಾರ್ ಶೆಟ್ಟಿ, ಬಾಲಕೃಷ್ಣ ಬಿಳಿನೆಲೆ,ಕೃಷ್ಣಪ್ಪ ಸ್ಕಂಧ, ಶ್ರೀನಿವಾಸ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.

ಮೆರವಣಿಗೆಯ ಬಳಿಕ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಕರ್ಷಕ ಸಿಡಿ ಮದ್ದಿನ ಪ್ರದರ್ಶನವನ್ನು ಆಯೋಜಿಸಲಾಗಿತ್ತು.ನಂತರ ಪ್ರಸಾದ ವಿತರಣೆ ನೆರವೇರಿತು.