ಕುಕ್ಕುಜಡ್ಕ ವಿಷ್ಣುನಗರ ವಿಷ್ಣುಮೂರ್ತಿ ರಕ್ತೇಶ್ವರೀ ಮತ್ತು ಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವ -ಭಜನೆ, ಸತ್ಯನಾರಾಯಣ ಪೂಜೆ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ 69 ನೇ ವಾರ್ಷಿಕ ಮಹೋತ್ಸವದ ಪ್ರಯುಕ್ತ ಇಂದು ಬೆಳಗ್ಗೆ ಹಸಿರುವಾಣಿ ಸಮರ್ಪಣೆಯೊಂದಿಗೆ ವೈದಿಕ ಕಾರ್ಯಕ್ರಮ ಆರಂಭಗೊಂಡಿತು. ಪುರೋಹಿತ ರಾಧಾಕೃಷ್ಣ ಭಟ್ ಜೋಗಿಯಡ್ಕ ನೇತೃತ್ವದಲ್ಲಿ ಬೆಳಗ್ಗೆ ಗಣಹೋಮ ಮತ್ತು ಲಕ್ಷ್ಮೀ ಸಹಿತಶ್ರೀಸತ್ಯನಾರಾಯಣ ದೇವರ ಪೂಜೆಯು ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ರಾಮ ಭಜನಾ ಮಂದಿರ ಕಲ್ಮಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ‌ಮಧ್ಯಾಹ್ನ ಮಹಾಪೂಜೆಯಾಗಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ವ್ಯವಸ್ಥಾಪಕ ಯಂ.ಜಿ.ಸತ್ಯನಾರಾಯಣ ಭಟ್ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಮಾಯ್ಪಡ್ಕ ಮನೆಯ ಬಂಧು ವರ್ಗದವರು ಪಾಲ್ಗೊಂಡಿದ್ದರು. ಇಂದು ಸಂಜೆ ಶ್ರೀ ದೈವಗಳ ಭಂಡಾರ ಇಳಿದು ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳಾದ ಶ್ರೀ ಧರ್ಮಸ್ಥಳ ಪಂಜುರ್ಲಿ,ಜಾವತೆ,ಮಂತ್ರವಾದಿ ಗುಳಿಗ,ರಕ್ತೇಶ್ವರೀ ಗುಳಿಗ,ಶ್ರೀ ಕಲ್ಕುಡ ,ಶ್ರೀ ಕಲ್ಲುರ್ಟಿ ಹಾಗೂ ಅಂಗಾರ ಬಾಕುಡ ದೈವದ ಕೋಲವು ನಡೆಯಲಿದೆ ಎಂದು ವ್ಯವಸ್ಥಾಪಕ ಯಂ.ಜಿ.ಎಸ್.ಭಟ್ ತಿಳಿಸಿದರು.