ನಾರ್ಣಕಜೆಯಲ್ಲಿದ್ದ ವೃದ್ಧೆಯನ್ನು ಕರೆದುಕೊಂಡು ಹೋದ ಮನೆಯವರು

0

ಇಂದು ಬೆಳಿಗ್ಗೆ ನಾರ್ಣಕಜೆಯಲ್ಲಿದ್ದ ವೃದ್ಧೆಯನ್ನು ಅವರ ಮನೆಯವರು ಬಂದು ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.

ಇಂದು ಬೆಳಿಗ್ಗೆ ನಾರ್ಣಕಜೆಯಲ್ಲಿ ಅಪರಿಚಿತ ವೃದ್ಧೆಯೊಬ್ಬರು ಗಾಬರಿಯಿಂದ ಓಡುತ್ತಿರುವುದನ್ನು ಗಮನಿಸಿದ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧ್ಯಕ್ಷರು ವಿಚಾರಿಸಿದರಾದರೂ ಯಾವುದೇ ಮಾಹಿತಿ‌ ನೀಡಿರಲಿಲ್ಲ.

ವೃದ್ಧೆಯು ಅಂಬೆಕಲ್ಲು ಬಾಲಕೃಷ್ಣ ಎಂಬವರ ಸಹೋದರಿಯಾಗಿದ್ದು, ಮನೆಯವರಿಗೆ ಹೇಳದೇ ಸಂಬಂಧಿಕರ ಮನೆಗೆಂದು ಬಂದಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಬಾಲಕೃಷ್ಣರವರು ಬಂದು‌ ಕರೆದುಕೊಂಡು ಹೋದರೆಂದು ತಿಳಿದು ಬಂದಿದೆ.