ಬೆಳ್ಳಾರೆ ಕೆ.ಪಿ.ಎಸ್ ನಲ್ಲಿ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ

0

ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಸಂಸ್ಥೆಯ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿಭಾಗಗಳ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಡಿ.30 ಮತ್ತು 31 ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ವಹಿಸಿದರು. ಎಸ್.ಡಿ.ಎಂ.ಸಿ . ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಅನಿಲ್ ರೈ ಚಾವಡಿಬಾಗಿಲು ಧ್ವಜಾರೋಹಣ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲರಾದ ವಿಶ್ವನಾಥ ಗೌಡ ಪಿ ಸ್ವಾಗತಿಸಿ, ಕಾಲೇಜು ವಿಭಾಗದ ವಾರ್ಷಿಕ ವರದಿ ವಾಚಿಸಿದರು.

ಉಪಪ್ರಾಂಶುಪಾಲರಾದ ಉಮಾಕುಮಾರಿ ಪ್ರೌಢ ವಿಭಾಗದ ಹಾಗೂ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ. ಪ್ರಾಥಮಿಕ ವಿಭಾಗದ ವರದಿ ವಾಚಿಸಿದರು. ಅತಿಥಿಗಳಾಗಿ ಸುರೇಶ್ ಕುಮಾರ್ ರೈ ಪನ್ನೆ ಭಾಗವಹಿಸಿದರು. ವೇದಿಕೆಯಲ್ಲಿ ಸಿವಿಲ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷ ಜೋಗಿಬೆಟ್ಟು, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪುರಂದರ ನಾರಾಯಣ ಭಟ್ , ಎಸ್.ಡಿ.ಎಂ.ಸಿ. ಸದಸ್ಯರುಗಳಾದ ವಸಂತ ಉಲ್ಲಾಸ್, ಬಾಲಪ್ಪ ಕಳಂಜ, ಮುರಳಿಕೃಷ್ಣ, ಹಮೀದ್ ಮರಕಡ, ಮಹಮ್ಮದ್ ಆರಿಸ್, ಮಹಮ್ಮದ್ ಆರಿಫ್, ಜಯಶ್ರೀ, ಹೇಮಾವತಿ, ಪಾರ್ವತಿ, ಶಮೀನಾಬಾನು, ನೆಸೀಮ, ಲೋಲಾಕ್ಷಿ , ನಿಕಟಪೂರ್ವ ಅಧ್ಯಕ್ಷರಾದ ಕೇಶವ ನಾಯಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಾಯಕರಾದ ಸನತ್ ಕುಮಾರ್, ಭವಿಷ್ ಮತ್ತು ಲೋಚನ್ ವೇದಿಕೆಯಲ್ಲಿದ್ದರು. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ನಡೆಸಿದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಸಂಸ್ಥೆಯ ಅಡುಗೆ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಅತಿಥಿ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಲಾಯಿತು.ಸಂಸ್ಥೆಯ ಎಲ್ಲಾ ಶಿಕ್ಷಕರನ್ನು , ವರ್ಗಾವಣೆಗೊಂಡ ಉಪನ್ಯಾಸಕರನ್ನು ಹಾಗೂ ಪದೋನ್ನತಿಗೊಂಡು ವರ್ಗಾವಣೆಯಾದ ಶಿಕ್ಷಕರಾದ ಶೇಷಮ್ಮ, ಮೀನಾಕ್ಷಿ ಮತ್ತು ಅನಸೂಯ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ ಮತ್ತು ಹರ್ಷ ಜೋಗಿಬೆಟ್ಟು ಇವರನ್ನು ಕಾರ್ಯಕ್ರಮದಲ್ಲಿ ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಶಿಕ್ಷಕರಾದ ಮಿಯ್ಯಗೆ ಬಿ ವಂದಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾವತಿ ಪಿ. ಕಾರ್ಯಕ್ರಮ ನಿರೂಪಿಸಿದರು.


ಅಪರಾಹ್ನ 2.00ರಿಂದ ಪ್ರೌಢ ಮತ್ತು ಕಾಲೇಜು ವಿಭಾಗದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಡಿಸೆಂಬರ್ 31 ರಂದು, ಬೆಳ್ಳಾರೆ ಮತ್ತು ಮಾಸ್ತಿಕಟ್ಟೆ(ತಡಗಜೆ) ಅಂಗನವಾಡಿ ಪುಟಾಣಿಗಳ ಚಿಲಿಪಿಲಿ ಕಲರವ, ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.