ಪಠ್ಯೇತರ ವಿಷಯಗಳಲ್ಲಿನ ಆಸಕ್ತಿಯನ್ನು ಪಠ್ಯದ ಕಡೆಗೂ ವಿಸ್ತರಿಸಿಕೊಳ್ಳಿ: ಡಾ. ದಾಮ್ಲೆ

0

“ವಿದ್ಯಾರ್ಥಿಗಳ ಕೆಲಸವೇ ಕಲಿಯುವುದಾಗಿದೆ. ಕಲಿಕೆಗೆ ಕೊನೆ ಇಲ್ಲ. ವಿದ್ಯಾರ್ಥಿಗಳೆಲ್ಲರೂ ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಬೇಕು. ಪಠ್ಯೇತರ ವಿಷಯಗಳಲ್ಲಿನ ಆಸಕ್ತಿಯನ್ನು ಪಠ್ಯದ ಕಡೆಗೆ ವಿಸ್ತರಿಸಿಕೊಳ್ಳಿ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಅವರು ಹೇಳಿದರು.


ದ. 31. ರ0ದು ಸ್ನೇಹ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಬ್ಯಾಂಕಿನ ಸುಳ್ಯ ಶಾಖೆಯ ವ್ಯವಸ್ಥಾಪನಾಧಿಕಾರಿ ಶ್ರೀ ಶಾಮರಾಜ್ ಭಟ್ ಮಾತನಾಡಿ ಶಾಲೆಯ ಚಟುವಟಿಕೆ ಹಾಗೂ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಕರ್ನಾಟಕ ಬ್ಯಾಂಕಿನ ಸವಲತ್ತುಗಳ ಬಗ್ಗೆ ತಿಳಿಸಿದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸಂಸ್ಥೆಯ ವರದಿ ವಾಚಿಸಿದರು.


ಬಳಿಕ ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ನೆಕ್ಕಿಲ ಅವರು “ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಎಂದೂ ಹಿಂದುಳಿಯುವುದಿಲ್ಲ . ಸ್ನೇಹ ಕನ್ನಡ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಸಾಧಕರಾಗಿದ್ದಾರೆ . ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ನಡತೆಯನ್ನು ಮಕ್ಕಳಲ್ಲಿ ಹುಟ್ಟು ಹಾಕುವುದರ ಮೂಲಕ ಉತ್ತಮ ನಾಗರಿಕರನ್ನು ರೂಪಿಸುವ ಈ ಸಂಸ್ಥೆ ಇನ್ನಷ್ಟು ಬೆಳೆಯಲು ಪೋಷಕರೆಲ್ಲರೂ ಸಹಕಾರ ನೀಡಬೇಕು” ಎಂದರು. ಶಿಕ್ಷಕರ ರಕ್ಷಕ ಸಂಘದ ಮಹಿಳಾ ಸದಸ್ಯೆ ಶ್ರೀಮತಿ ನಳಿನಿ ಹೆಚ್ ಕೆ ಮಾತನಾಡಿ “ಈ ಶಾಲೆಯಲ್ಲಿ ಕಲಿತ ಮಕ್ಕಳಲ್ಲಿ ಧೈರ್ಯ, ಆಲೋಚನಾ ಶಕ್ತಿ ಬೆಳೆಯುತ್ತದೆ. ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಿ ತಮ್ಮ ಬದುಕನ್ನು ಸಾಗಿಸಲು ಈ ಸಂಸ್ಥೆ ಉತ್ತೇಜನ ನೀಡುತ್ತದೆ . ಸ್ನೇಹ ಶಿಕ್ಷಣ ಸಂಸ್ಥೆ ನನ್ನ ಮಗಳ ನೆಚ್ಚಿನ ಸಂಸ್ಥೆಯಾಗಿದ್ದು ಸ್ನೇಹ ಎಂಬ ಹೆಸರಿನಂತೆ ಇಲ್ಲಿ ಎಲ್ಲರೂ ಸ್ನೇಹಿತರಾಗಿದ್ದಾರೆ”ಎಂದರು.
ನಮ್ಮ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಇವರು ಮಾತನಾಡಿ “ವಿದ್ಯೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಇಲ್ಲಿ ಪ್ರೋತ್ಸಾಹ ಸಿಗುತ್ತದೆ. ವಿದ್ಯೆ, ವಿವೇಕ, ವಿನಯ ನೀಡುವ ಸಂಸ್ಥೆ ಇದಾಗಿದೆ” ಎಂದರು.


ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದು ಅವುಗಳಲ್ಲಿ ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನವನ್ನು ವಿತರಿಸಲಾಯಿತು . ಬಳಿಕ ಪ್ರೌಢ ಬಾಲಕರ ವಿಭಾಗದಲ್ಲಿ ಸಂದೇಶ ಕೆ ಆರ್ 10ನೇ ತರಗತಿ ಹಾಗೂ ಬಾಲಕಿಯರ ವಿಭಾಗದಲ್ಲಿ ಜ್ಞಾನವಿ ಪಿ ಜೆ 9ನೇ ತರಗತಿ ಇವರಿಗೆ ವೈಯಕ್ತಿಕ ಚಾಂಪಿಯನ್ ನೀಡಲಾಯಿತು . ಪ್ರಾಥಮಿಕ ವಿಭಾಗದ ಬಾಲಕರಲ್ಲಿ ಅರವಿಂದ ಕೆ ಆರ್ 7 ನೇ ತರಗತಿ ಹಾಗೂ ಚೈತನ್ಯ ಎ 7ನೇ ತರಗತಿ ಇವರಿಗೆ ವೈಯಕ್ತಿಕ ಚಾಂಪಿಯನ್ ನೀಡಲಾಯಿತು.
ಇದೇ ಸಂದರ್ಭದಲ್ಲಿ ಎಸ್ ಎಲ್ ಸಿ ಸಾಧಕರನ್ನು ಗೌರವಿಸಲಾಯಿತು . 2019 20 ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದ ಉತ್ತಮ್ ರೈ ಹಾಗೂ ದ್ವಿತೀಯ ಸ್ಥಾನ ಪಡೆದ ಅಪರ್ಣಾ ಎ ಇವರನ್ನು , 2020 21 ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದ ತುಷಾರ್ ಡಿ ಕೆ ಮತ್ತು ದ್ವಿತೀಯ ಸ್ಥಾನ ಪಡೆದ ಶಿವಚರಣ್ ಹೊಳ್ಳ ಇವರನ್ನು 2021 22ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದ ಶೃಜನ್ ಕೆ ಮತ್ತು ದ್ವಿತೀಯ ಸ್ಥಾನ ಪಡೆದ ಉದಿತ್ ಕುಮಾರ್ ಪಿ ಪಿ ಇವರನ್ನು ಗೌರವಿಸಲಾಯಿತು.ಕನ್ನಡ ಪ್ರಥಮ ಭಾಷೆಯಲ್ಲಿ ಶೇಕಡ 100 ಅಂಕಗಳನ್ನು ಗಳಿಸಿದ ಹಯನ ಪಿ ಎ, ಶಿವಚರಣ ಹೊಳ್ಳ ಎನ್, ಶೃಜನ್ ಕೆ ಹಾಗೂ ಆಶಿಕಾ ಯು ಇವರನ್ನು ಗೌರವಿಸಲಾಯಿತು. ಹಿಂದಿ ತೃತೀಯ ಭಾಷೆಯಲ್ಲಿ ಶೇಕಡ 100 ಅಂಕ ಗಳಿಸಿದ ಅಪರ್ಣಾ ಎ , ತುಷಾರ್ ಡಿ ಕೆ , ಹಯನ ಪಿ ಎ, ನಿಶಾಂಕ್ ಎ ವಿ ಮತ್ತು ಗಣಿತ ವಿಷಯದಲ್ಲಿ ಶೇಕಡ 100 ಅಂಕಗಳಿಸಿದ ನಿಶಾಂಕ್ ಎ ವಿ ಇವರೆಲ್ಲರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ದೇವಿಪ್ರಸಾದ ಜಿ ಸಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಜಯಂತಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಸವಿತಾ ಎಂ ನಿರೂಪಿಸಿದರು.