ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ‌ಮಜ್ದೂರ್ ಸಂಘದ ವತಿಯಿಂದ ‌ಮನವಿ

0

ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ‌ಮಜ್ದೂರು ಸಂಘ ಸುಳ್ಯ ತಾಲೂಕು ವತಿಯಿಂದ ತಹಶೀಲ್ದಾರ್ ‌ಮೂಲಕ ಸರಕಾರಕ್ಕೆ ‌ಮನವಿ ಸಲ್ಲಿಸಲಾಯಿತು.

2023ರ ಜನವರಿ 03 ರಂದು ಬೇಡಿಕೆ ದಿನ ಆಚರಣೆ ಅಂಗವಾಗಿ ಮನವಿ ಸಲ್ಲಿಸಲಾಗಿದ್ದು,

ಭಾರತೀಯ ಮಜ್ದೂರ್ ಸಂಘ ಕಳೆದ 15 ವರ್ಷಗಳಿಂದ ದೇಶದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮತ್ತು ಅವರ ಶ್ರೇಯೋಭಿವೃದ್ಧಿಗೆ ಹಾಗೂ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿರುವ ಅತಿ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ. ಅದರ ಜೊತೆಯಲ್ಲಿ ಅವರಲ್ಲಿ ರಾಷ್ಟ್ರೀಯತೆ ಹಾಗೂ ಸಾಮಾಜಿಕ ಕಳಕಳಿಯನ್ನು ಮೂಡಿಸುತ್ತಾ ಕೆಲಸ ಮಾಡುತ್ತಿದೆ.

ಕರ್ನಾಟಕ ರಾಜ್ಯದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಉದಾಸೀನ ಮಾಡುತ್ತಿರುವುದು ಮತ್ತು ಹಲವು ಕಾರ್ಮಿಕ ವಿರೋಧ ನೀತಿಗಳನ್ನು ಅನುಸರಿಸುತ್ತಿರುವುದನ್ನು ಭಾರತೀಯ – ಮಜೂರ್ ಸಂಘ ತೀವ್ರವಾಗಿ ಖಂಡಿಸುತ್ತದೆ.

ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಡಲು ಆಗ್ರಹಿಸಿ ಭಾರತೀಯ ಮನ್ಸೂರ್ ಸಂಘ) 2021 ಜನವರಿ 13ರಂದು ಬೇಡಿಕೆ ದಿನವನ್ನಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ.

ನಾವು ಈ ದಿನ ನಮ್ಮ ಈ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಈ ಮನವಿ ಪತ್ರವನ್ನು ನೀಡುತ್ತಿದ್ದೇವೆ. ಈ ಕೂಡಲೇ ಸಮಸ್ಯೆಗಳ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು ಮತ್ತು ನಮ್ಮ ಸಂಘ ಪದಾಧಿಕಾರಿಗಳ ನಿಯೋಗದ
ಜೊತೆ ಮಾತುಕತೆ ಮಾಡಬೇಕೆಂದು ಇಲ್ಲವಾದಲ್ಲಿ ಮುಂದಿನ ಹೋರಾಟವನ್ನು ನಡೆಸಲಾಗುವುದು ಎಂದು‌ ಮನವಿಯಲ್ಲಿ ವಿನಂತಿಸಲಾಗಿದೆ.