*ಸುಧೀರ್ ರೈ ಮೇನಾಲರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ*

0

*ಜಾತಿ – ಧರ್ಮದ ಭೇದವಿಲ್ಲದೆ ಬದುಕಿದವರು ಸುಧೀರ್ ರೈ*

ಜಾತಿ ಧರ್ಮದ ಭೇದವಿಲ್ಲದೆ ಎಲ್ಲರೊಂದಿಗೆ ಒಂದಾಗಿ ಬೆರೆಯುತ್ತಿದ್ದ ಮೇನಾಲದ ಸುಧೀರ್ ರೈಯವರ ಅಗಲಿಕೆ ಸಮಾಜಕ್ಕೆ ನಷ್ಟ. ಎಂತದ್ದೆ ಕ್ಲಿಷ್ಟಕರ ಪರಿಸ್ಥಿತಿ ಎದುರಾದರೂ ಊರಿನಲ್ಲಿ, ಕುಟುಂಬದಲ್ಲಿ ನಾವೆಲ್ಲರೂ ಒಂದೇ ಎಂದು ತೋರಿಸಿಕೊಟ್ಟವರು ಅವರು‌ ಎಂದು ಸುಧೀರ್ ರೈಯವರ ಆಪ್ತರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘಟಕ, ಕಾಂಗ್ರೆಸ್ ನಾಯಕ ದಿ. ಸುಧೀರ್ ರೈ ಮೇನಾಲರಿಗೆ ಮೇನಾಲದ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಜ.4 ರಂದು ಸಂಜೆ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು‌ ನುಡಿನಮನ ಸಲ್ಲಿಸಿದರು.ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ ರವರು ನುಡಿನಮನ ಸಲ್ಲಿಸಿ ಸುಧೀರ್ ರೈಯವರ ಜೀವನ, ಬದುಕಿದ ರೀತಿಯ ಕುರಿತು ವಿವರಿಸಿದರು.

ಮೇನಾಲ ಕುಟುಂಬದ ಹಿರಿಯರಾದ ಗುಡ್ಡಪ್ಪ ರೈ ಮೇನಾಲ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ, ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್, ಕ.ಸಾ.ಪ. ಜಿಲ್ಲಾ ಸಮಿತಿ ನಿರ್ದೇಶಕ ರಾಮ ಪಲ್ಲತಡ್ಕ, ಸುಳ್ಯ ಸಿ.ಎ.‌ಬ್ಯಾಂಕ್ ಉಪಾಧ್ಯಕ್ಷ ಶೀನಪ್ಪ ಬಯಂಬು ಮಾತನಾಡಿ, ಸುಧೀರ್ ರೈಯವರ ವ್ಯಕ್ತಿತ್ವದ ಕುರಿತು ಮಾತನಾಡಿ, ಅವರ ಮಗನ ವಿದ್ಯಾಭ್ಯಾಸಕ್ಕೆ ಜತೆಯಾಗಿ ನಿಂತು ಮನೋಸ್ಥೈರ್ಯ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮ ಆರಂಭದಲ್ಲಿ ಮೇನಾಲ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಪದ್ಮನಾಭ ಸ್ವಾಮೀಜಿ ಸುಧೀರ್ ರೈ ಭಾವಚಿತ್ರ ದೆದುರು ದೀಪ ಬೆಳಗಿದರು. ಬಳಿಕ ಗೀತೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸುಭೋದ್ ಶೆಟ್ಟಿ ಮೇನಾಲ ಪ್ರಾಸ್ತಾವಿಕ ಮಾತನಾಡಿದರು.

ನವೀನ್ ರೈ ಮೇನಾಲ, ಪ್ರಸಾದ್ ರೈ ಮೇನಾಲ, ಪಿ.ಎಸ್. ಗಂಗಾಧರ್, ಗೋಕುಲ್ ದಾಸ್, ಲೀಲಾ ಮನಮೋಹನ್, ಸುಧೀರ್ ರೈಯವರ ಸಹೋದರಿ ಸುಜಿತಾ ಸೇರಿದಂತೆ ನೂರಾರು ಮಂದಿ ಭಾಗವಹಿಸಿದರು.ಬಾಲಕೃಷ್ಣ ಮೇನಾಲ‌ ಕಾರ್ಯಕ್ರಮ ನಿರೂಪಿಸಿದರು.