ಹರಿಹರ ಪಲ್ಲತಡ್ಕ ಗ್ರಾ.ಪಂ ಸಭೆ, ಆರ್ ಟಿ ಸಿ ಯೂ ಇಲ್ಲ, ಸರ್ಕಾರಿ ಯೋಜನೆಯ ಪ್ರಯೋಜನವೂ ಇಲ್ಲ ಕೃಷಿಕರ ಅಸಹಾಯಕತೆ

0

ಹರಿಹರ ಪಲ್ಲತಡ್ಕ ಗ್ರ‍ಾ.ಪಂ ನ ಗ್ರಾಮ ಸಭೆ ಇಂದು ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಹಲವು ಗ್ರಾಮಸ್ಥರಿಗೆ ಆರ್ ಟಿ ಸಿ ಇಲ್ಲದೆ , ಸರ್ಕಾರಿ ಯೋಜನೆಯ ಪ್ರಯೋಜನ ಆಗದಿರುವ ಬಗ್ಗೆ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳು ವಿವಿಧ ಯೋಜನೆ ಮೂಲಕ ಕೃಷಿಕರಿಗೆ ಸವಲತ್ತು ನೀಡಿದರೂ ಹರಿಹರ, ಬಾಳುಗೋಡು ಭಾಗದಲ್ಲಿ ಆರ್ ಟಿ ಸಿ ದೊರೆಯದೆ ಇಲಾಖೆಗಳ ಸವಲತ್ತು ದೊರೆಯುತ್ತಿಲ್ಲ ಎಂದು ಅಕ್ರೋಶ ವ್ಯಕ್ತವಾಯಿತು. ಆದ್ದರಿಂದಲೇ ಗ್ರಾಮಸ್ಥರು ಗ್ರಾಮ ಸಭೆಗೆ ಬರುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.ವೇದಿಕೆಯಲ್ಲಿ ಉಪಾಧ್ಯಕ್ಷ ವಿಜಯಕುಮಾರ್ ಅಂಙಣ, ಸದಸ್ಯರುಗಳಾದ ದಿವಾಕರ ಮುಂಡಾಜೆ, ಬಿಂದು. ಪಿ, ಶಿಲ್ಪಾ ಕೊತ್ನಡ್ಕ, ಪದ್ಮಾವತಿ ಕಲ್ಲೇಮಠ ವೇದಿಕೆಯಲ್ಲಿದ್ದರು. ಪಂಚಾಯತ್ ಅಭಿವೃದ್ಧಿ ಪುರುಷೋತ್ತಮ ಮಣಿಯಾನ ವೇದಿಕೆಯಲ್ಲಿದ್ದರು.

ಕ್ಷೇತ್ರ ಸಂಪನ್ಮೂಲ ಕೇಂದ ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀಮತಿ ಶೀತಲ್ ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಪುರುಷೋತ್ತಮ ಮಣಿಯಾನ ಸ್ವಾಗತ ಹಾಗೂ ವಂದನಾರ್ಪಣೆ ಮಾಡಿದರು. ಶ್ರೀಮತಿ ಇಂದಿರಾಂಬ ಹಾಗೂ ಜಯಕುಮಾರ್ ವರದಿ ವಾಚಿಸಿದರು. ಪ್ರಿಯ ಕಲ್ಲೇಮಠ ಸಹಕರಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಅಮೃತ ಅಭಿಯಾನದಂತೆ ಗ್ರಾಮಸ್ಥರ ಆರೋಗ್ಯ ಪರೀಕ್ಷೆ ನಡೆಯಿತು.