ಕೆ.ವಿ.ಜಿ.ಪಾಲಿಟೆಕ್ನಿಕ್ : ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕ ಉದ್ಘಾಟನೆ

0

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನಲ್ಲಿ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜ್ಯುಕೇಷನ್ ನ ವಿದ್ಯಾರ್ಥಿ ಘಟಕವು ಉದ್ಘಾಟನೆ ಗೊಂಡಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಯವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಐ.ಎಸ್.ಟಿ.ಇ ಕರ್ನಾಟಕದ ಸೆಕ್ಷನ್ ಮ್ಯಾನೆಜಿಂಗ್ ಕಮಿಟಿ ಸದಸ್ಯ ಮತ್ತು ಮೂಡುಬಿದ್ರಿ ಯೇನಪೋಯ ಇನ್ಸ್ಟಿಟ್ಯೂಟ್ ನ ಸಹಾಯಕ ಪ್ರಾಧ್ಯಾಪಕ ಶಶಾಂಕ್ ಎಂ.ಗೌಡ ಘಟಕವನ್ನು ಉದ್ಘಾಟಿಸಿ ತಾಂತ್ರಿಕ ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಶ್ರೀಧರ್ ಎಂ.ಕೆ, ಆಂತರಿಕ ಗುಣಮಟ್ಟ ಖಾತರಿ ಕೋಶ(ಐ.ಕ್ಯೂ.ಎ.ಸಿ) ಸಂಚಾಲಕ ವಿವೇಕ್ ಪಿ. ಐ.ಎಸ್.ಟಿ.ಇ ವಿದ್ಯಾರ್ಥಿ ಘಟಕದ ಸಂಚಾಲಕ ಫಾಲಚಂದ್ರ ವೈ.ವಿ ಉಪಸ್ಥಿತರಿದ್ದರು. ಗ್ರಂಥಪಾಲಕಿ ಕವಿತಾ ಪಿ.ಡಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಇಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕಿ ಪೂರ್ಣಿಮ ಸ್ವಾಗತಿಸಿ, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥೆ ರಾಮಾದೇವಿ ವಂದಿಸಿದರು. ಸಂವಹನ ಕೌಶಲ್ಯ ಉಪನ್ಯಾಸಕಿ ಬಿಂದು ಕೆ.ವಿ ಕಾರ್ಯಕ್ರಮ ನಿರೂಪಿಸಿದರು.