ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಪೂರ್ವಭಾವಿ ಸಭೆ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವವು ಫೆ.8,9 ಮತ್ತು 10 ರಂದು ನಡೆಯಲಿದ್ದು ಪೂರ್ವಭಾವಿ ಸಭೆಯು ಜ.02 ರಂದು ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿ ವೈದಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಮಾತನಾಡಿ ಜಾತ್ರೋತ್ಸವವು ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪದ್ಮನಾಭ ಭಟ್, ಸಮಿತಿ ಸದಸ್ಯರಾದ ದೇವದಾಸ್ ಕತ್ಲಡ್ಕ, ದಯಾನಂದ ಚೆಮ್ನೂರು,ಕರಿಯಪ್ಪ ಕೋಡ್ತೀಲು,ತಾರಾ ಆರ್.ರಾವ್ ಉದ್ದಂಪಾಡಿ,ದಾಸಪ್ಪ ಗೌಡ ಕೋಡ್ತೀಲು,ಪದ್ಮಾವತಿ ಖಂಡಿಗೆಮೂಲೆ,ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ, ಎಸ್.ಎನ್.ಮನ್ಮಥ, ಚಂದ್ರ ಕೋಲ್ಚಾರ್, ಎಸ್.ಎನ್.ದೇವಿಪ್ರಸಾದ್ , ಶಿವಪ್ಪ ಗೌಡ ನೆಕ್ಕರೆಕಜೆ, ರವಿನಾಥ ಮಡ್ತಿಲ, ನವೀನ್ ಚಾತುಬಾಯಿ, ರಾಮಚಂದ್ರ ಪಲ್ಲತ್ತಡ್ಕ, ದೇವಸ್ಥಾನದ ಸಿಬ್ಬಂದಿ ಯಶವಂತ ಬಾರೆತ್ತಡ್ಕ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.