ಸುಳ್ಯ ಜಾತ್ರೆಯ ಸಂತೆ ಅಂಗಡಿ ಏಲಂ ಪ್ರಕ್ರಿಯೆ ಆರಂಭ

0

ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ಸಂತೆ ಅಂಗಡಿ ಹಾಕುವ ವ್ಯಾಪಾರಸ್ಥರಿಗೆ ಸ್ಥಳ ಕಾದಿರಿಸುವ ಏಲಂ ಪ್ರಕ್ರಿಯೆ ಇಂದು ಬೆಳಗ್ಗೆ ಪ್ರಾರಂಭಗೊಂಡಿತು.

ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಕೃಪಾಶಂಕರ ತುದಿಯಡ್ಕ ಏಲಂ ಪ್ರಕ್ರಿಯೆ ನಡೆಸಿದರು. ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಏಲಂ ನಲ್ಲಿ ಅಂಗಡಿ ವ್ಯಾಪಾರಸ್ಥರು ಭಾಗವಹಿಸಿದರು.