ಮೊಗರ್ಪಣೆ ಸುನ್ನಿ ಬಾಲ ಸಂಘ ವತಿಯಿಂದ ತಾಜುಲ್ ಉಲಮಾ ಹಾಗೂ ಅಗಲಿದ ನೇತಾರರ ಅನುಷ್ಮರಣಾ ಸಂಗಮ ಮತ್ತು ಬುರ್ದಾ ಮಜ್ಲೀಸ್

0


ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳ ಎಸ್ ಬಿ ಎಸ್ ಸಂಘಟನೆ ವತಿಯಿಂದ ತಾಜುಲ್ ಉಲಮಾ-ನೂರುಲ್ ಉಲಮಾ, ಚೆರಿಯ ಎ ಪಿ ಉಸ್ತಾದ್, ಲತೀಫ್ ಸಅದಿ ಪಯಶ್ವಿ ರವರ ಅನುಸ್ಮರಣಾ ಕಾರ್ಯಕ್ರಮ ಡಿಸೆಂಬರ್ 5ರಂದು ಮೊಗರ್ಪಣೆ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಅನುಷ್ಮರಣಾ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಪಳ್ಳಿ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿರವರ ನೇತೃತ್ವದಲ್ಲಿ ಮಾಂಬ್ಳಿ ವಲಿಯವರ ದರ್ಗಾದಲ್ಲಿ ಪ್ರಾರ್ಥನೆ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ವೇದಿಕೆಯಲ್ಲಿ ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀ ಫುಡ್ ಗೌರವ ಉಪಸ್ಥಿತರಾಗಿದ್ದರು.
ಖ್ಯಾತ ಪ್ರಭಾಷಣಕಾರ ಸುನ್ನಿ ಜಮ್ಮಿಯತುಲ್ ಉಲಮಾ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಹುಸೈನ್ ಸಅದಿ ಅಗಲಿದ ನೇತಾರರ ಅನುಷ್ಮರಣಾ ಪ್ರಭಾಷಣವನ್ನು ನಡೆಸಿದರು.


ಬಳಿಕ ಖ್ಯಾತ ಬುರ್ದಾ ಮಜ್ಲೀಸ್ ಆಲಾಪಕರಾದ ಸಯ್ಯಿದ್ ತ್ವಾಹಾ ತಂಙಳ್, ಶಾಹಿನ್ ಬಾಬೂ ರವರ ತಂಡದಿಂದ ನಾತ್, ಮತ್ತು ಮಧ್ಹ್ ಹಾಡುಗಳು, ಬುರ್ದಾ ಮಜ್ಲೀಸ್ ನಡೆಯಿತು.
ವೇದಿಕೆಯಲ್ಲಿ ಸಯ್ಯಿದ್ ಜೈನುಲ್ ಆಬಿದ್ದೀನ್ ತಂಙಳ್ ಜಯನಗರ, ಸ್ಥಳೀಯ ಮಸ್ಜಿದ್ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ, ಎಚ್ ಐ ಜೆ ಕಮಿಟಿ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷರುಗಳಾದ ಸಿ ಎಮ್ ಉಸ್ಮಾನ್, ಹಾಜಿ ಉಮ್ಮರ್, ನಿರ್ದೇಶಕರುಗಳಾದ ಎಸ್ ಸಂಸುದ್ದೀನ್ ಅರಂಬೂರು, ಅಬ್ದುಲ್ ಖಾದರ್,ಸ್ವಾಗತ ಸಮಿತಿ ಕನ್ವೀನರ್ ಅಶ್ರಫ್ ಭಾರತ್,ಬಶೀರ್ ಸಕಾಫಿ ಜಯನಗರ,ಸಿದ್ದೀಕ್ ಕಟ್ಟೆಕ್ಕಾರ್ಸ್, ಪೈಚಾರು ಜುಮಾ ಮಸೀದಿ ಖತೀಬರು, ಅಂಬಟಡ್ಕ ಜುಮ ಮಸೀದಿ ಕತೀಬರು, ಮೊಗರ್ಪಣೆ ನೂರುಲ್ ಇಸ್ಲಾಂ ಮದರಸ ಅಧ್ಯಾಪಕರುಗಳು, ಮೊದಲಾದವರು ಉಪಸ್ಥಿತರಿದ್ದರು.
ಎಸ್ ಬಿ ಎಸ್ ಸಂಘದ ವತಿಯಿಂದ ಮಸೀದಿ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರವಹಿಸಿಕೊಂಡಿರುವ ಸ್ಥಳೀಯ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್, ಹಾಗೂ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಅನುಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಹಕರಿಸುವ ಹಿರಿಯರಾದ ಹಾಜಿ ಪಳ್ಳಿ ಕುಂಞಿ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಇದೇ ಸಂದರ್ಭದಲ್ಲಿ ಎಸ್ ಜೆ ಎಂ ಪ್ರತಿಭೋತ್ಸವ ಸಂಗಮದಲ್ಲಿ ಮೊಗರ್ಪಣೆ ಮದರಸದಿಂದ ಭಾಗವಹಿಸಿ ರಾಜ್ಯಮಟ್ಟದಲ್ಲಿ ಪೋಸ್ಟರ್ ಡಿಸೈನ್ ವಿಭಾಗದಲ್ಲಿ ಸ್ಪರ್ಧಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡ ಮಹಮ್ಮದ್ ಜಾಸಿಂ,ಮತ್ತು ಉರ್ದು ಪದ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡ ಮಹಮ್ಮದ್ ಶಫೀಕ್ ಜಯನಗರ ರವರಿಗೆ ಸ್ಥಳೀಯ ಆಡಳಿತ ಸಮಿತಿ ವತಿಯಿಂದ ಮತ್ತು ಎಸ್ ಬಿ ಎಸ್ ವತಿಯಿಂದ ಸ್ಮರಣಿಕೆ ಫಲಕ ನೀಡಿ ಗೌರವಿಸಲಾಯಿತು.
ಸ್ಥಳೀಯ ಮದರಸ ಸದರ್ ಮುಅಲ್ಲಿಮ್ ಮಹಮ್ಮದ್ ಸಕಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.
ಸಮಿತಿ ಸದಸ್ಯರು, ಸ್ಥಳೀಯ ಯುವಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.