ಅಡ್ತಲೆ ರಸ್ತೆ 28 ವರ್ಷಗಳಿಂದ ಅಭಿವೃದ್ಧಿ ಕಾಣಲಿಲ್ಲ – ಗುದ್ದಲಿ ಪೂಜೆ ದಿವಸವೇ ಕಾಮಗಾರಿ ಆರಂಭಿಸಲಿ

0

ನಾಗರಿಕ ಹಿತರಕ್ಷಣಾ ವೇದಿಕೆ ಒತ್ತಾಯ

ಸುಳ್ಯ ತಾಲೂಕು ಅರಂತೋಡು- ಅಡ್ತಲೆ- ಎಲಿಮಲೆ ರಸ್ತೆ ಅಭಿವೃದ್ಧಿಗಾಗಿ ನಾಗರೀಕ ಹಿತರಕ್ಷಣಾ ವೇದಿಕೆ ವತಿಯಿಂದ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ ಚುನಾವಣಾ ಬಹಿಷ್ಕಾರ ಫಲಕಗಳನ್ನು ಅಳವಡಿಸಿ ಪ್ರತಿಭಟಿಸಿದರು ಇಷ್ಟರ ವರೆಗೆ ಜನಪ್ರತಿನಿಧಿಗಳು ಭರವಸೆ ಕೊಟ್ಟದ್ದು ಹೊರತು ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಅದರಿಂದ ಈಗಾಗಲೇ ನಮಗೆ ತಿಳಿದ ಮೂರು ಕೋಟಿ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ ಜ.8 ರಂದು ನಡೆಯಲಿದ್ದು, ಅದೇ ದಿನ ಕಾಮಗಾರಿ ಆರಂಭಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಹೇಳಿದ್ದಾರೆ.

ಜ.6 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ನಮ್ಮ ರಸ್ತೆಗೆ ಈ ಮೊದಲು ಹಲವಾರು ಕೋಟಿ ಅನುದಾನಗಳು ಘೋಷಣೆ ಆಗಿದೆ. ಆದರೆ ಅದ್ಯಾವುದೂ ಕಾಮಗಾರಿ ರೂಪ ಪಡೆದಿಲ್ಲ. ಇದೀಗ ಮೂರು ಕೋಟಿ ಅನುದಾನದ ಇದೆ ಎಂದು ಹೇಳುತ್ತಿದ್ದಾರೆ. ಅದರ ಮೇಲೂ ಸಹ ನಮಗೆ ಭರವಸೆ ಇಲ್ಲ. ಆದುದರಿಂದ ಗುದ್ದಲಿ ಪೂಜೆ ಮಾಡುವ ದಿನ ಕಾಮಗಾರಿ ಪ್ರಾರಂಭ ಮಾಡಲಿ ಅಥವಾ ಕಾಮಗಾರಿ ಮಾಡುವ ದಿನ ಗುದ್ದಲಿ ಪೂಜೆ ಮಾಡಲಿ. ನಮ್ಮ ಬೇಡಿಕೆಯು ಕನಿಷ್ಠ ಅಡ್ತಲೆ ತನಕ ರಸ್ತೆ ಅಭಿವೃದ್ಧಿ ಆಗಬೇಕು. ಅಲ್ಲೀ ತನಕ ಅಭಿವೃದ್ಧಿ ಮಾಡಿ ತೋರಿಸಲಿ ನಾವೇ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಸನ್ಮಾನ ಮಾಡುತ್ತೇವೆ.
ನಮ್ಮ ಹೋರಾಟ ರಸ್ತೆ ಅಭಿವೃದ್ಧಿ ಹಾಗೂ ಅರಮನೆಗಯ ಸೇತುವೆ. ಇದು ಈಡೇರುವ ತನಕ ನಿರಂತರ ಹೋರಾಟ ಮಾಡುತ್ತೇವೆ.
ಹಲವಾರು ವರ್ಷಗಳಿಂದ ನಿರಂತರ ಈ ಭಾಗದ ಜನರ ಬೇಡಿಕೆಯಾಗಿತ್ತು. ಅರಂತೋಡು ಅಡ್ತಲೆ ರಸ್ತೆ ಈ ರಸ್ತೆ ಅಭಿವೃದ್ಧಿ ಗ್ರಾಮ ಪಂಚಾಯತ್ ಸದಸ್ಯರಿಂದ ಹಿಡಿದು ಮುಖ್ಯಮಂತ್ರಿ ಯವರೆಗೆ ನಾವು ಮನವಿ ಮಾಡಿದ್ದೇವು. ಇದು ವರೆಗೂ ಯಾವುದೇ ಅಭಿವೃದ್ಧಿ ಕಾಣಲಿಲ್ಲ ಅದರಿಂದ ಈ ರಸ್ತೆ ಅಭಿವೃಧ್ಧಿಯಾಗುವರೆಗೂ ನಾವು ಯಾವುದೇ ಚುನಾವಣೆಯಲ್ಲಿ, ಪಕ್ಷದ ಪರವೂ ಕೆಲಸ ಮಾಡುವುದ್ದಿಲ್ಲ. ನೋಟಾ ಅಭಿಯಾನ ಮಾಡುತ್ತೇವೆ. ನಾನು ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿ ಇರವುದು ನಮಗೆ ಸರಿಯಾಗುವುದಿಲ್ಲ. ನನ್ನ ಪತ್ನಿ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದಳಾಗಿದ್ದಾಳೆ. ಗ್ರಾಮ ಪಂಚಾಯತ್ ನಿಂದ ಹಿಡಿದು ಎಲ್ಲಾ ಮಟ್ಟದಲ್ಲೂ ಬಿಜೆಪಿ ಪಕ್ಷ ಆಡಳಿತದಲ್ಲಿ ಇದೆ. ನಮ್ಮ ಯಾವುದೇ ಬೇಡಿಕೆಗೆ ಸ್ಪಂದಿಸದೆ ಇರುವುದರಿಂದ ನಾವು ಬೆಸತ್ತಿದ್ದೇವೆ. ನಮ್ಮ ರಸ್ತೆ ಅಭಿವೃದ್ಧಿ ಕಾಣದೆ ನಾವು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಬಾಗವಹಿಸುವುದ್ದಿಲ್ಲ ಎಂದು ಹಿತರಕ್ಷಣಾ ವೇದಿಕೆ ಸಮಿತಿ ಸದಸ್ಯ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಲೋಹಿತ್ ಅಡ್ತಲೆ ತಿಳಿಸಿದರು.

30 ವರ್ಷದಿಂದ ಅರಮನೆಗಯ ಸೇತುವೆ ಬೇಡಿಕೆ ಮಾತ್ರ
ಅರಮನೆಗಯ ಸೇತುವೆ ನಿರ್ಮಾಣ ಆಗಬೇಕು ಎನ್ನುವುದು ಹಲವಾರು ವರ್ಷಗಳಿಂದ ಈ ಭಾಗದ ಜನರ ಬೇಡಿಕೆ. ಅದನ್ನು ಇದುವರೆಗೂ ಮಾಡಲು ಯಾವುದೇ ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ ಇಲಾಖೆ ವೆಬ್ಸೈಟ್ ನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತೋರಿಸುತ್ತಿದೆ ಇದು ವರೆಗೆ ಅಲ್ಲಿ ಯಾವುದೇ ಅಭಿವೃದ್ಧಿ ಕಾಣಲಿಲ್ಲ ಅದರಿಂದ ಆ ಭಾಗದ ಜನರು ಚುನಾವಣಾ ಬಹಿಷ್ಕಾರ ಮಾಡುವುದರೊಂದಿಗೆ ನೋಟ ಅಭಿಯಾನದಲ್ಲಿ ಕೈಜೋಡಿಸುತ್ತೆವೆ ಎಂದು ತೇಜಕುಮಾರ್ ಅರಮನೆಗಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಹಿತ್ ಮೇಲಡ್ತಲೆ, ಮೋಹನ್ ಪಂಜದಬೈಲು ಅಡ್ತಲೆ, ಹರಿಶ್ಚಂದ್ರ ಮೇಲಡ್ತಲೆ, ಶಶಿಕುಮಾರ್ ಉಳುವಾರು, ದುರ್ಗಾಪ್ರಸಾದ್ ಮೆಲಡ್ತಲೆ, ಸೌಮ್ಯ ದುರ್ಗಾ ಪ್ರಸಾದ್, ಶ್ಯಾಮಲಾ ಹರಿಪ್ರಸಾದ್, ಲತಾಜಯರಾಂ, ಗಣೇಶ್ ಅಡ್ತಲೆ
ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ರಂಜಿತ್ ಅಡ್ತಲೆ ಉಪಸ್ಥಿತರಿದ್ದರು