ಅಯ್ಯಪ್ಪ ಮಾಲಾಧಾರಿ ಬಾಲಕನನ್ನು ರಸ್ತೆ ದಾಟಿಸುತ್ತಿರುವ ಮುಸ್ಲಿಂ ವೃದ್ಧ : ಫೊಟೋ ವೈರಲ್

0

ಮುಸ್ಲಿಂ ವೃದ್ಧರೋರ್ವರು ಅಯ್ಯಪ್ಪ ಮಾಲಾಧಾರಿ ಬಾಲಕನ ಕೈ ಹಿಡಿದು ರಸ್ತೆ ದಾಟಿಸುತ್ತಿರುವ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಲ್ಲುಗುಂಡಿ ಸಮೀಪ ಇಂದು ಬೆಳಿಗ್ಗೆ ಅಯ್ಯಪ್ಪ ಮಾಲಾಧಾರಿ ಯಾದ ಸೋನು ಎಂಬ ಬಾಲಕನನ್ನು ಪರಿಚಿತರಾದ ಇಬ್ರಾಹಿಂ ಮೈಲಿಕಲ್ಲು ಎಂಬವರು ಸಮೀಪದ ಹಣ್ಣಿನ ಅಂಗಡಿ ಕರೆದುಕೊಂಡು ಹೋಗಿ ಹಣ್ಣು ನೀಡಿ ಉಪಚರಿಸಿ ರಸ್ತೆ ದಾಟಿಸಿ ಬಿಟ್ಟಿದ್ದರು. ಈ ವೇಳೆ ಯಾರೋ ಕ್ಕಿಕ್ಕಿಸಿದ ಪೊಟೋವೊಂದು
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಸೌಹಾರ್ದತೆ ಸಾರುವ ಚಿತ್ರ ಎಂಬ ಬರಹದೊಂದಿಗೆ ವೈರಲ್ ಆಗುತ್ತಿದೆ.