ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಉದ್ಘಾಟನೆ
ಮಾನಸಿಕ ಒತ್ತಡ ನಿರ್ವಹಣಾ ಮಾಹಿತಿ ಕಾರ್ಯಕ್ರಮ

0

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ಜ. ೦೬ ರಂದು ನಡೆಯಿತು. ಮತ್ತು ಮಾನಸಿಕ ಒತ್ತಡ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ ವಹಿಸಿದ್ದರು. ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಡಾ. ಪೂನಂ. ಎಮ್ ಮುಖ್ಯ ಅತಿಥಿಗಳಾಗಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿದರು, ಇನ್ನೋರ್ವ ಮುಖ್ಯ ಅತಿಥಿ ಕು. ನಮ್ರತಾ ಉಪಸ್ಥಿರಿದ್ದರು. ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಕೆ.ವಿ. ಹೇಮನಾಥ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಉಪನ್ಯಾಸಕಿ ಟೀನಾ. ಹೆಚ್.ಎಸ್ ರಾಷ್ಟ್ರೀಯ ಸೇವಾ ಯೋಜನಾ ಘಟಕಾಧಿಕಾರಿ ರಂಜನ್. ಕೆ.ಎನ್ ಉಪಸ್ಥಿತರಿದ್ದರು. ಡಾ. ಪೂನಂ ಮತ್ತು ಕು. ನಮ್ರತಾ ಕೆ.ವಿ.ಜಿ ಮೆಡಿಕಲ್ ಕಾಲೇಜು ಇವರು ಮಾನಸಿಕ ಒತ್ತಡ ನಿರ್ವಹಣೆ ಬಗ್ಗೆ ಕಾರ್ಯಗಾರವನ್ನು ನಡೆಸಿದರು.


ವಿದ್ಯಾರ್ಥಿನಿಯರಾದ ದಿವಿಜಾ, ಅಂಜಲಿ, ಸುಶ್ಮಾಂಜಲಿ ಪ್ರಾರ್ಥಿಸಿದರು, ಜೀವಿತ್ ಕೆ.ಪಿ ಸ್ವಾಗತಿಸಿ, ಕಾರ್ತಿಕ್. ಪಿ.ಡಿ ವಂದಿಸಿದರು. ಸುಮಾ ವೈ ಭಟ್ ನಿರೂಪಿಸಿದರು.