ಸಾಂದೀಪ್ ಶಾಲೆಗೆ ಆರ್ ಕೆ ನಾಯರ್ ಭೇಟಿ , ಅಭಿನಂದನಾ ಕಾರ್ಯಕ್ರಮ

0


ಎಂ ಬಿ ಫೌಂಡೇಶನ್ ಇದರ ವತಿಯಿಂದ ನಡೆಸುತ್ತಿರುವ ಸಾಂದೀಪ್ ವಿಶೇಷ ಮಕ್ಕಳ ಶಾಲೆಗೆ ಗ್ರೀನ್ ಹೀರೋ ಆಫ್ ಇಂಡಿಯಾ ಸಾಮಾಜಿಕ ಧುರೀಣ ಉದ್ಯಮಿ ಆರ್ ಕೆ ನಾಯರ್ ರವರು ಸಾಂದೀಪ್ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿ ಮಕ್ಕಳ ಕಾರ್ಯ ವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.


ಇದೇ ಸಂದರ್ಭದಲ್ಲಿ ಸಾಂದೀಪ್ ವಿಶೇಷ ಶಾಲೆ ವತಿಯಿಂದ ಆರ್ ಕೆ ನಾಯರ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶೇಷ ಶಾಲೆ ಅಧ್ಯಕ್ಷ ಎಂ ಬಿ ಸದಾಶಿವ ವಹಿಸಿದರು.

ಸಾಂದೀಪ್ ಶಾಲೆ ನಿರ್ದೇಶಕ ಯಶ್ವಿತ್ ಕಾಳಂಮನೆ, ಮೊದಲಾದವರು ಉಪಸ್ಥಿತರಿದ್ದರು.


ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ, ಸಾಂದೀಪ್ ಶಾಲೆ ಸಂಚಾಲಕಿ ಹರಿಣಿ ಸದಾಶಿವ ವಂದಿಸಿದರು.


ಶಾಲೆ ಬೇಟಿ ನೀಡಿದ ಆರ್ ಕೆ ನಾಯರ್ ರವರು ಮಕ್ಕಳ ಅಭಿವೃದ್ಧಿ ಪೂರಕವಾದ ಸಹಾಯ ನೀಡುವ ಭರವಸೆಯನ್ನು ನೀಡಿದರು.