ಕೆವಿಜಿ ವಿದ್ಯಾ ಸಂಸ್ಥೆಗಳ ವತಿಯಿಂದ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವಕ್ಕೆ ಹಸಿರುವಾಣಿ ಸಮರ್ಪಣೆ

0

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವಕ್ಕೆ ಕೆವಿಜಿ ಶಿಕ್ಷಣ ಸಂಸ್ಥೆಗಳ ವತಿಯಿಂದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗು ಕೆವಿಜಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾ ಪ್ರಸಾದ್ ಕೆ.ವಿ.ಅವರ ನೇತೃತ್ವದಲ್ಲಿ ಹಸಿರುವಾಣಿ ಸಮರ್ಪಿಸಲಾಯಿತು.

ಹಸಿರು ವಾಣಿ ಸಮರ್ಪಣೆಗೆ ಮುನ್ನ ಸುಳ್ಯ ನಗರದಲ್ಲಿ ಮೆರವಣಿಗೆ ನಡೆಯಿತು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗು ಕೆವಿಜಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾ ಪ್ರಸಾದ್ ಕೆ.ವಿ.ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.


ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಾಧಿಕಾರಿ ಡಾ.ಉಜ್ಬಲ್ ಯು.ಜೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸುರೇಶ್.ವಿ, ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಜಯಪ್ರಕಾಶ್, ಐಟಿಐ ಪ್ರಾಂಶುಪಾಲ ಚಿದಾನಂದ ಬಾಳಿಲ, ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಯಶೋಧಾ ರಾಮಚಂದ್ರ, ಭಾಗಮಂಡಲ ಐಟಿಐ ಪ್ರಾಂಶುಪಾಲ ಶ್ರೀಕಾಂತ್ ಕುಡೆಕಲ್ಲು, ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಶ್ರೀಧರ ಎಂ.ಕೆ, ಸೂಪರಿಂಡೆಂಟ್ ಶಿವರಾಮ ಕೇರ್ಪಳ, ಕೆವಿಜಿ ದಂತ ಮಹಾವಿದ್ಯಾಲಯದ‌ ಆಡಳಿತಾಧಿಕಾರಿ ಬಿ.ಟಿ.ಮಾಧವ, ಆಡಳಿತ ಕಚೇರಿಯ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ,ಐಟಿಐ ಸೂಪರಿಂಡೆಂಟ್ ಭವಾನಿಶಂಕರ ಅಡ್ತಲೆ,
ಡಾ.ಮನೋಜ್, ಅನಿಲ್ .ಬಿ.ವಿ, ಅರುಣ್ ಕುರುಂಜಿ, ಅನಿಲ್ .ಬಿ.ವಿ, ಕಮಲಾಕ್ಷ ನಂಗಾರು, ದಯಾನಂದ ಅಟ್ಲೂರ್, ರಾಜೇಶ್ ಕೊಲ್ಲಮೊಗ್ರ, ಆನಂದ ಕುಡೆಂಬಿ, ವಸಂತ ಕಿರಿ ಭಾಗ,ಧನಂಜಯ ಕಲ್ಲುಗದ್ದೆ, ನ.ಪಂ‌.ಮಾಜಿ ಸದಸ್ಯ ಗಿರೀಶ್ ಕಲ್ಲುಗದ್ದೆ ಮತ್ತಿತರರು ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಸಮರ್ಪಣೆ:
ನಗರದಲ್ಲಿ ಮೆರವಣಿಗೆಯ ಮೂಲಕ ಹಸಿರುವಾಣಿಯ‌ ಸಮರ್ಪಣೆ ನಡೆಯಿತು. ಡಾ.ರೇಣುಕಾಪ್ರಸಾದ್ ಕೆ.ವಿ, ಡಾ.ಉಜ್ವಲ್ ಊರುಬೈಲು ಮತ್ತಿತರರು ಹಸಿರುವಾಣಿಯನ್ನು ದೇವಸ್ಥಾನಕ್ಕೆ ಸಮರ್ಪಿಸಿದರು. ಪ್ರಮುಖರಾದ ಎನ್.‌ಎ.ರಾಮಚಂದ್ರ, ಭರತ್ ಮುಂಡೋಡಿ, ಸಂತೋಷ್ ಕುತ್ತಮೊಟ್ಟೆ, ಜಯಪ್ರಕಾಶ್ ಕುಂಚಡ್ಕ, ಬಾಲಗೋಪಾಲ ಸೇರ್ಕಜೆ,ಪಿ.ಎಸ್‌.ಗಂಗಾಧರ, ಎಸ್‌.ಆರ್.ಸೂರಯ್ಯ ಮತ್ತಿತರರು ಉಪಸ್ಥಿತರಿದ್ದರು.