ಅಡೂರು ಕ್ಷೇತ್ರ ಜಾತ್ರೋತ್ಸವ ಸಮಿತಿಯ ಮಹಾಸಭೆ- ನೂತನ ಸಮಿತಿ ರಚನೆ

0

ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಶ್ರೀಮಹಾವಿಷ್ಣು ವಿನಾಯಕ ಕ್ಷೇತ್ರದ ಮಹಾಸಭೆಯು ಅಧ್ಯಕ್ಷ ಅತ್ತನಾಡಿ ರಾಮಚಂದ್ರ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ನಡೆದು ಗತ ವರ್ಷದ ತಾತ್ರೋತ್ಸವದ ಲೆಕ್ಕ ಪತ್ರಗಳನ್ನು ಮಹಾಸಭೆಗೆ ತಿಳಿಯಪಡಿಸಿ ಸಭೆಯ ಅಂಗೀಕಾರ ಪಡೆಯಲಾಯಿತು.
ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ರಮಾನಾಥ ಶೆಟ್ಟಿಯವರು ಕಳೆದ ಜಾತ್ರೋತ್ಸವದ ಸಂದರ್ಭ ಅನುಸರಿಸಿದ ನೀತಿ ನಿಯಮಗಳನ್ನು ವಿವರಿಸಿ ಮುಂದಿನ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
೨೦೨೩ನೇ ವರ್ಷದ ಜಾತ್ರೋತ್ಸವವನ್ನು ವೈಭವದಿಂದ ನಡೆಸಲು ತೀರ್ಮಾನಿಸಿ ನೂತನ ಸಮಿತಿಯನ್ನು ರಚಿಸಲಾಯಿತು.

ಮುಂದಿನ ೨೦೨೩ನೇ ಸಾಲಿನ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಅತ್ತನಾಡಿ ರಾಮಚಂದ್ರ ಮಣಿಯಾಣಿ, ಉಪಾಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಸದಾಶಿವ ರೈ, ರಾಮನಾಯ್ಕ್ ಆಡೂರು, ಅಶೋಕ ನಾಯ್ಕ್ ಪಾಂಡಿ, ಹಾಗೂ ಕಾರ್ಯದರ್ಶಿಯಾಗಿ ಕಾಂತಡ್ಕ ಗಂಗಾಧರ ಮತ್ತು ಜೊತೆ ಕಾರ್ಯದರ್ಶಿಗಳಾಗಿ ರಮೇಶ ಚೀನಪ್ಪಾಡಿ ಮತ್ತು ಧನಂಜಯ ಅಡೂರು ಹಾಗೂ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಣಾಧಿಕಾರಿಯವರನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಗೆ ಹನ್ನೊಂದು ಉಪಸಮಿತಿಗಳನ್ನು ರಚಿಸಲಾಯಿತು. ಸಭೆಯನ್ನು ಉದ್ದೇಶಿಸಿ ಕ್ಷೇತ್ರ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಎ.ಗೋಪಾಲ ಮಾಣಿಯಾಣಿ ನಾಗತ್ತಮೂಲೆ, ಉತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಸದಾಶಿವ ರೈ ಬೆಳ್ಳಿಪ್ಪಾಡಿ ಮಾತನಾಡಿ, ಸಹಕಾರ ಯಾಚಿಸಿದರು.

ಸಭೆಯಲ್ಲಿ ಗಿರಿಧರ ರಾವ್ ಅಡೂರು, ರವಿಶಂಕರ ನ್ಯಾಕ್ ಚಂದ್ರಂಬೈಲು, ಸಂಜೀವ, ಕೊಪ್ಪಳ, ನಂದಕುಮಾರ್ ಪಾಂಡಿ, ಪದ್ಮನಾಭ ನ್ಯಾಕ್ ಅಡೂರು, ಗಂಗಾಧರ ಮಾಸ್ತರ್ ಮೂಲಡ್ಕ, ಅಶೋಕ ನಾಯ್ಕ್ ಪಾಂಡಿ ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯದರ್ಶಿ ಗಂಗಾಧರ ಕಾಂತಡ್ಕ ವಂದಿಸಿದರು.