ಬಳ್ಪ ನೀರಜರಿಯಲ್ಲಿ ನೇಮೋತ್ಸವ

0

ಬಳ್ಪ ಗ್ರಾಮದ ನೀರಜರಿ ಶ್ರೀ ನಾಗಬ್ರಹ್ಮ ಆದಿ ಮೊಗೆರ್ಕಳ ದೈವಸ್ಥಾನದಲ್ಲಿ 9ನೇ ವರ್ಷದ ದೈವಗಳ ನೇಮೋತ್ಸವ ಜ. 7 ಮತ್ತು 8ರಂದು ನಡೆಯಿತು.

ಜ. 7ರಂದು ಬೆಳಿಗ್ಗೆ ಗಣಹೋಮ, ಸಂಜೆ ಶ್ರೀ ಧರ್ಮಶಾಸ್ತಾ ಭಜನಾ‌ ಮಂಡಳಿ ಬಳ್ಪ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಗುಳಿಗ ದೈವದ ಭಂಡಾರ ತೆಗೆದು ನೇಮೋತ್ಸವ ಜರಗಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ಮೊಗೇರ್ಕಳ ಗರಡಿ ಇಳಿಯುವುದು, ತನ್ನಿ ಮಾಣಿಗ ಗರಡಿ ಇಳಿಯುವುದು ನಡೆಯಿತು.

ಜ. 8ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಗಂಧ ಪ್ರಸಾದ ವಿತರಣೆ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.