ಅಮೇರಿಕಾದಲ್ಲಿ ನಡೆಯುವ MDRT ಸಮಾವೇಶದಲ್ಲಿ ಭಾಗವಹಿಸಲು ಪಿ.ಎಸ್.ಗೋಪಾಲಕೃಷ್ಣ ಆಯ್ಕೆ

0

ಅಮೇರಿಕದ ನೆಸ್ಸಿಲೆ ಟೆನ್ನೆಸ್ಸಿ(USA) ಯಲ್ಲಿ 2023ರ ಜೂನ್ 25 ರಿಂದ 28 ರ ತನಕ ನಡೆಯುವ MDRT ಸಮಾವೇಶದಲ್ಲಿ ಭಾಗವಹಿಸಲು ಗೋಪಾಲಕೃಷ್ಣ ಪಿ.ಎಸ್.ರವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಕಳೆದ 25ವರ್ಷಗಳಿಂದ ಎಲ್ಲೈಸಿ ಪ್ರತಿನಿಧಿತ್ವವನ್ನು ಪಡೆದುಕೊಂಡು,2003 ರಿಂದ ನಿರಂತರ ಕೋಟಿಪತಿ,ಶತಕ,ದ್ವಿಶತಕ,ಚತುರ್ಷತಕ ವೀರರಾಗಿ ಉಡುಪಿ ವಿಭಾಗದಲ್ಲಿ ಉತ್ತಮ ನಿರ್ವಹಣೆಯೊಂದಿಗೆ ಸುಳ್ಯ ತಾಲೂಕಿನ 12 ಗ್ರಾಮಗಳನ್ನು ವಿಮಾಗ್ರಾಮವಾಗಿಸುವುದರೊಂದಿಗೆ ದಕ್ಷಿಣ ಮಧ್ಯ ವಲಯಾಧಿಕಾರಿಯವರು ವಿಮಾಗ್ರಾಮ ಘೋಷಣೆ ಮಾಡಲು ಬೆಳ್ಳಾರೆಗೆ ಬರುವಲ್ಲಿ ಶ್ರಮವಹಿಸಿದ್ದಾರೆ.ವಿಮಾಗ್ರಾಮ ಸ್ಪೆಶಲಿಸ್ಟ್ ಎಂಬ ಖ್ಯಾತಿಯೊಂದಿಗೆ ಉಡುಪಿ ವಿಭಾಗದಲ್ಲಿ ಪ್ರಪ್ರಥಮ ವಿಮಾಶಾಲೆ ಘೋಷಣೆಗೆ ಕಾರಣೀಕರ್ತರಾಗಿದ್ದಾರೆ. I proposal,Online Proposal ಗಳನ್ನು 2013 ರಿಂದ ನಿರಂತರ ನೀಡುತ್ತ ಕಳೆದ ವರ್ಷಗಳಿಂದ ಆತ್ಮ ನಿರ್ಭರ ಡಿಜಿಟಲ್ ಆಪ್ ನಲ್ಲಿ ANANDA Modula ದಲ್ಲಿ ಸ್ಥಳದಲ್ಲಿಯೇ ಕುಳಿತು ಪಾಲಿಸಿಯನ್ನು ನೀಡುತ್ತ ಆಧುನಿಕ ಕಂಪ್ಯೂಟರ್ ಯುಗದ ಹೊಸ ತಂತ್ರಜ್ಞಾನದಲ್ಲಿ ಪಾಲಿಸಿ ನೀಡುತ್ತಿರುವ ಪುತ್ತೂರು ಶಾಖೆಯ ಏಕೈಕ ವ್ಯಕ್ತಿಯಾಗಿ ಉಡುಪಿ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಥಮ ಸ್ಥಾನಿಯಾಗಿದ್ದು 2009 ರಿಂದ ಮುಖ್ಯ ವಿಮಾ ಸಲಹೆಗಾರರಾಗಿ ಹಲವಾರು ಪ್ರತಿನಿಧಿಯನ್ನು ನೇಮಕ ಮಾಡಿ ಉತ್ತಮ ವ್ಯವಹಾರ ಮಾಡುತ್ತಿದ್ದಾರೆ. USA ಯ MDRT ಯಾಗಿ ಅಂದರೆ ವಿಮಾ ವ್ಯವಹಾರದ ಉನ್ನತ ಸ್ಥರದ ವ್ಯವಹಾರ ನಡೆಸುವವರಾಗಿ 2022 ಮತ್ತು 2023 ರ ಲ್ಲಿ ಆಯ್ಕೆಗೊಂಡು ಎರಡನೇ ಭಾರಿ USA ಯಲ್ಲಿ ಮೂರು ದಿವಸಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.ಇವರು ಬೆಳ್ಳಾರೆಯಲ್ಲಿ ಕೆನರಾ ಬ್ಯಾಂಕಿನ ಹತ್ತಿರದ ಕ್ಲಾಸಿಕ್ ಕಾಂಪ್ಲೆಕ್ಸ್ ನಲ್ಲಿ 2009 ರಿಂದ ಕಛೇರಿಯನ್ನು ನಡೆಸುತಿದ್ದು ಎಲೈಸಿ ಕಂತು ಸ್ವೀಕೃತಿ,ವಾಹನಗಳ ಇನ್ಸೂರೆನ್ಸ್ ಪಾಲಿಸಿಗಳನ್ನು ನೀಡುತ್ತ ಸಾವಿರಾರು ಪಾಲಿಸಿದಾರರನ್ನು ಹೊಂದಿದ್ದಾರೆ.ಈ ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಜಲಶೋಧನೆ,ಉಪನ್ಯಾಸಗಳನ್ನು ನೀಡುತ್ತಿದ್ದಾರೆ.