ಕೇನ್ಯ: ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರ ಬಿಡುಗಡೆ

0

ಸ್ವಾಮಿ ಕೊರಗಜ್ಜ ಗೆಳೆಯರ ಬಳಗ ಕಾಯಂಬಾಡಿ, ಕಣ್ಕಲ್ ಇದರ ಆಶ್ರಯದಲ್ಲಿ ಜ. 21ರಂದು ನಡೆಯಲಿರುವ ಸೂರ್ಯ ಬೆಳಕಿನ 65 ಕೆ. ಜಿ. ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ. 8ರಂದು ಶ್ರೀ ನಾಗಬ್ರಹ್ಮ ಮುಗೇರ್ಕಳ ದೈವಸ್ಥಾನ ಕಾಯಂಬಾಡಿ, ಕಣ್ಕಲ್ ಇದರ ವಠಾರದಲ್ಲಿ ನಡೆಯಿತು.

ಹಿರಿಯ ಕಬಡ್ಡಿ ಆಟಗಾರ ಧರ್ಣಪ್ಪ ಗೌಡ ಕಣ್ಕಲ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ಗೆಳೆಯರ ಬಳಗದ ಗೌರವ ಅಧ್ಯಕ್ಷರಾದ ಯುವರಾಜ್ ಕಣ್ಕಲ್, ಅಧ್ಯಕ್ಷರಾದ ವೆಂಕಪ್ಪ ಗೌಡ ಕಾಯಂಬಾಡಿ, ಕಾರ್ಯದರ್ಶಿ ಪ್ರಶಾಂತ್ ಗೌಡ ಕಾಯಂಬಾಡಿ, ಉಪಾಧ್ಯಕ್ಷ ಗಣೇಶ್ ಆಚಾರ್ಯ ಪೇರಳಕಟ್ಟೆ, ಮೋನಪ್ಪ ಪೂಜಾರಿ, ಯಶೋಧರ ಗೆಜ್ಜೆ , ಪ್ರಕಾಶ್ ಕಾಯಂಬಾಡಿ ಮೊದಲದವರು ಉಪಸ್ಥಿತರಿದ್ದರು.