ಸಂಪಾಜೆ ಸಹಕಾರಿ ಸಂಘದ ಶತಮಾನೋತ್ಸವ ಪ್ರಯುಕ್ತ ನಡೆದ ಕ್ರೀಡಾಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯ ಫಲಿತಾಂಶ

0


ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭವು ಜ. ೨೧-೨೨ರಂದು ಜರುಗಲಿದ್ದು, ಆ ಪ್ರಯುಕ್ತ ಕ್ರೀಡಾಕೂಟವು ಜ.೧, ೨, ೮ ರಂದು ಸಂಪಾಜೆ ಸ.ಹಿ.ಪ್ರಾ. ಶಾಲಾ ಆವರಣ ಮತ್ತು ವಿಷ್ಣುಮೂರ್ತಿ ದೈವಸ್ಥಾನದ ಗದ್ದೆಯಲ್ಲಿ ನಡೆಯಿತು.


ಫಲಿತಾಂಶದ ವಿವರ :
ಲಗೋರಿ ಸ್ಪರ್ಧೆಯಲ್ಲಿ ಗುತ್ತಿಗಾರು ಸೊಸೈಟಿ ಪ್ರಥಮ, ಪಂಜ ಸೊಸೈಟಿ ದ್ವಿತೀಯ, ಶಟಲ್ ಕಾಕ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಡೊಮನಿಕ್ & ರಿನ್ಸನ್ ಪ್ರಥಮ, ರಂಜನ್ & ಸನತ್ ಎಸ್ ಪಿ ದ್ವಿತೀಯ, ಸತ್ಯ ಮತ್ತು ತಂಡ ತೃತೀಯ, ಮಹಿಳೆಯರ ವಿಭಾಗದಲ್ಲಿ ಸುರೇಖಾ ಮತ್ತು ಶ್ರುತಿ ಪ್ರಥಮ, ಕಾವ್ಯ ಮತ್ತು ಶ್ರಾವಣಿ ದ್ವಿತೀಯ, ಗುಡ್ಡಗಾಡು ಓಟದಲ್ಲಿ ಪುರುಷರ ವಿಭಾಗದಲ್ಲಿ ಮೌಶಿಕ್ ಜಿ.ಎಸ್. ಪ್ರಥಮ, ವಿಜಯೇಂದ್ರ ದ್ವಿತೀಯ, ಶ್ರೀತನ್ ತೃತೀಯ, ಧರ್ಮ ಪ್ರಸಾದ್ ಚತುರ್ಥ, ಮಹಿಳೆಯರ ವಿಭಾಗದಲ್ಲಿ ಧರ್ಮಕಲಾ ಕೆ.ಎನ್. ಪ್ರಥಮ, ಯಶೋಧ ಗೂನಡ್ಕ ದ್ವಿತೀಯ, ನವ್ಯಶ್ರೀ ದಂಡೆಕಜೆ ತೃತೀಯ, ವಿಭೀಷ ಕಡೆಪಾಲ ಚತುರ್ಥ ಬಹುಮಾನ ಗಳಿಸಿದ್ದಾರೆ.
ಭಾರದ ಗುಂಡೆಸೆತ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಅಬ್ದುಲ್ ರಜಾಕ್ ಗೂನಡ್ಕ ಪ್ರಥಮ, ಹಿತಿನ್ ಕೊಯಿಂಗಾಜೆ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಪುಣ್ಯಶ್ರೀ ರೈ ಸಂಪಾಜೆ ಪ್ರಥಮ, ಮೌಲ್ಯ ಸಂಪಾಜೆ ದ್ವಿತೀಯ, ಮೂರುಕಾಲಿನ ಓಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಶೃತನ್ ಮತ್ತು ವರುಣ್ ಪ್ರಥಮ, ಕ್ಷೇಮ್ ಮತ್ತು ಕೃತನ್ ದ್ವಿತೀಯ, ೫೦ ವರ್ಷ ಮೇಲ್ಪಟ್ಟವರಿಗೆ ಅಂಗಿಗೆ ಗುಬ್ಬಿ ಹಾಕಿ ಓಡುವ ಸ್ಪರ್ಧೆಯಲ್ಲಿ ನಾಗೇಶ್ ಪಿ.ಆರ್. ಪ್ರಥಮ ಬಹುಮಾನ ಗಳಿಸಿದ್ದಾರೆ.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಉಬರಡ್ಕ ಸೊಸೈಟಿ ಪ್ರಥಮ, ಮುರುಳ್ಯ ಸೊಸೈಟಿ ದ್ವಿತೀಯ, ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಸಂಪಾಜೆ ಸೊಸೈಟಿ ಪ್ರಥಮ, ಮಂಡೆಕೋಲು ಸೊಸೈಟಿ ದ್ವಿತೀಯ, ಗುಡ್ಡೆಗಾಡು ಓಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಜೀವಿತ್ ಸಂಪಾಜೆ ಸೊಸೈಟಿ ಪ್ರಥಮ, ನಾರಾಯಣ ಮಂಡೆಕೋಲು ಸೊಸೈಟಿ ದ್ವಿತೀಯ, ಸುನಿಲ್ ತೋಟ ಪಂಜ ಸೊಸೈಟಿ ತೃತೀಯ, ವಿಜಯೇಂದ್ರ ಸಂಪಾಜೆ ಸೊಸೈಟಿ ಚತುರ್ಥ, ತಾರನಾಥ ಮಂಡೆಕೋಲು ಸೊಸೈಟಿ ೫ ನೆ ಸ್ಥಾನ, ರಾಜೇಶ್ ಐವರ್ನಾಡು ಸೊಸೈಟಿ ೬ನೇ ಸ್ಥಾನ ಗಳಿಸಿದ್ದಾರೆ.
ಮಹಿಳೆಯರ ವಿಭಾಗದ ತೋಬಲ್ ಸ್ಪರ್ಧೆಯಲ್ಲಿ ಹರಿಹರ ಕೊಲ್ಲಮೊಗ್ರ ಸೊಸೈಟಿ ಪ್ರಥಮ, ಮಡಪ್ಪಾಡಿ ಸೊಸೈಟಿ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಸಂಪಾಜೆ ಸೊಸೈಟಿಯ ಮೋಹನ್ ಕುಮಾರ್ ಪ್ರಥಮ, ಬಾಳಿಲ ಸೊಸೈಟಿಯ ಸುಜಿತ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಸಂಪಾಜೆ ಸೊಸೈಟಿಯ ಪುಣ್ಯಶ್ರೀ ರೈ ಪ್ರಥಮ, ಶ್ರುತಿ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಮಹಿಳೆಯರ ವಿಭಾಗದ ನಿಂಬೆ ಚಮಚ ಓಟದಲ್ಲಿ ಸರೋಜಾ ಕೆಎಂ ಪ್ರಥಮ, ದಮಯಂತಿ ಕಡೆಪಾಲ ದ್ವಿತೀಯ, ಗೋಣಿಚೀಲ ಓಟ ಸ್ಪರ್ಧೆಯಲ್ಲಿ ಧರ್ಮಕಲಾ ಪೇರಾಲು ಪ್ರಥಮ, ಜನನಿ ಕೆ.ಎಸ್. ದ್ವಿತೀಯ, ಪುರುಷರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸೋಮಣ್ಣ ಫ್ಯಾನ್ಸ್ ಪ್ರಥಮ, ನೆಲ್ಲಿಕುಮೇರಿ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಶ್ರೀ ವಿಷ್ಣು ತಂಡ ಕಲ್ಲುಗುಂಡಿ ಪ್ರಥಮ, ಶ್ರೀ ಶಾರದಾ ಗೂನಡ್ಕ ದ್ವಿತೀಯ, ಪುರುಷರ ವಿಭಾಗದ ಲಗೋರಿ ಸ್ಪರ್ಧೆಯಲ್ಲಿ ಕಲ್ಲುಗುಂಡಿ ಬ್ರದರ್ಸ್ ಬಿ ತಂಡ ಪ್ರಥಮ, ಕಲ್ಲುಗುಂಡಿ ಬ್ರದರ್ಸ್ ಎ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಗೂನಡ್ಕ ಪ್ರಥಮ, ಶ್ರೀ ವಿಷ್ಣು ಕಲ್ಲುಗುಂಡಿ ದ್ವಿತೀಯ, ವಿಷವರ್ತುಲ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಅನುಜ್ಞಾ ಬಿ.ಕೆ. ಪ್ರಥಮ, ರೇಖಾ ಜೋಡಿಪಣೆ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಆರು ವರ್ಷದ ಕೆಳಗಿನ ಪುಟಾಣಿಗಳಿಗೆ ನಡೆದ ಕಪ್ಪೆ ಜಿಗಿತ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಗೂನಡ್ಕ ಅಂಗನವಾಡಿಯ ವಿಸ್ಮಯ್ ಗೂನಡ್ಕ ಪ್ರಥಮ, ದರ್ಕಾಸ್ ಅಂಗನವಾಡಿಯ ಯಾದೀಶ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಗೂನಡ್ಕ ಅಂಗನವಾಡಿಯ ದಿಶಾ ಪ್ರಥಮ, ರಾಜಾರಾಂಪುರ ಅಂಗನವಾಡಿಯ ಶರಣ್ಯ ದ್ವಿತೀಯ, ಎಲ್ ಕೆ ಜಿ ಯು ಕೆ ಜಿ ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ಲಿಯಾನ್ ಚಂದ್ರ ಎಸ್. ಪಿ. ಪ್ರಥಮ, ಮಾರುತಿ ಸ್ಕೂಲ್ ನ ಧೃತನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಪ್ರಿಯಾಲಿ ಎಸ್. ಪಿ. ಪ್ರಥಮ, ಮಾರುತಿ ಸ್ಕೂಲ್ ನ ಮನಸ್ವಿ ದ್ವಿತೀಯ, ತೆಕ್ಕಿಲ್ ಸ್ಕೂಲ್ ನ ರಿಜಾ ಫಾತಿಮಾ ತೃತೀಯ ಬಹುಮಾನ ಗಳಿಸಿದ್ದಾರೆ.
ಆರು ವರ್ಷದ ಕೆಳಗಿನ ಪುಟಾಣಿಗಳಿಗೆ ನಡೆದ ಕಾಳು ಹೆಕ್ಕುವ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ದರ್ಖಾಸ್ ಅಂಗನವಾಡಿಯ ಮಹಮ್ಮದ್ ಶಹದ್ ಪ್ರಥಮ, ದರ್ಕಾಸ್ ಅಂಗನವಾಡಿಯ ರಕ್ಷಣ ದ್ವಿತೀಯ , ಕಲ್ಲುಗುಂಡಿ ಅಂಗನವಾಡಿಯ ಲೋಚನ್ ತೃತೀಯ, ಬಾಲಕಿಯರ ವಿಭಾಗದಲ್ಲಿ ಕಡೆಪಾಲ ಅಂಗನವಾಡಿಯ ಶೈಮಾ ತೋಮಸ್ ಪ್ರಥಮ, ಆಯಿಷ ಐಫಾ ದ್ವಿತೀಯ, ರಾಜಾರಾಂಪುರ ಅಂಗನವಾಡಿಯ ಹಿಮಾ ತೃತೀಯ, ಎಲ್ ಕೆ ಜಿ ಯು ಕೆ ಜಿ ವಿಭಾಗದ ಬಾಲಕರ ವಿಭಾಗದಲ್ಲಿ ಲಿಯಾನ್ ಚಂದ್ರ ಎಸ್ ಪಿ ಪ್ರಥಮ, ಧ್ರುವನೀತ್ ದ್ವಿತೀಯ, ಧೃತನ್ ತೃತೀಯ, ಬಾಲಕಿಯರ ವಿಭಾಗದಲ್ಲಿ ಪ್ರಿಯಾಲಿ ಎಸ್. ಪಿ. ಪ್ರಥಮ, ಮನಸ್ವಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಎರಡನೇ ತರಗತಿಯವರಿಗೆ ನಡೆದ ೫೦ ಮೀಟರ್ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಕಲ್ಲುಗುಂಡಿ ಶಾಲೆಯ ತುಷಾರ್ ಪ್ರಥಮ, ರಿಷಿಕ್ ದ್ವಿತೀಯ, ಗೂನಡ್ಕ ತೆಕ್ಕಿಲ್ ಶಿಕ್ಷಣ ಸಮೂಹ ಸಂಸ್ಥೆಯ ಯೋಜಿತ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಗೂನಡ್ಕ ಶಾರದಾ ಶಾಲೆಯ ಅಯಾ ಫಾತಿಮಾ ಪ್ರಥಮ, ಕಲ್ಲುಗುಂಡಿ ಸಮೇರಪುರ ಆಂಗ್ಲ ಮಾಧ್ಯಮ ಶಾಲೆಯ ಐಪಾ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಮೂರರಿಂದ ಐದನೇ ತರಗತಿಯವರೆಗೆ ನಡೆದ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ಸ್ವರೂಪ ಪ್ರಥಮ, ಆರ್ಯ ದ್ವಿತೀಯ, ವಿಭಾಗದಲ್ಲಿ ಗೂನಡ್ಕ ಶ್ರೀ ಶಾರದಾ ಅನುದಾನಿತ ಶಾಲೆಯ ಫಾಯಿಲ ಪ್ರಥಮ, ಸವೇರಪುರ ಆಂಗ್ಲ ಮಾಧ್ಯಮ ಶಾಲೆಯ ದಿಶಾ ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಆರರಿಂದ ೭ನೇ ತರಗತಿಯವರೆಗೆ ನಡೆದ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸವೇರಪುರದ ಇಜಾನ್ ಮಹಮ್ಮದ್ ಪ್ರಥಮ, ಜಸ್ವಿನ್ ಸುಜನ್ ಡಿಸೋಜಾ ದ್ವಿತೀಯ, ವಿಭಾಗದಲ್ಲಿ ಸವೆರ ಪುರ ಶಾಲೆಯ ಖದೀಜಾ ಜಕೀಯ ಪ್ರಥಮ, ಮೂಲಕ ಶಾಲೆಯ ಅನ್ನತ್ ದ್ವಿತೀಯ ಬಹುಮಾನ ಗಳಿಸಿದ್ದಾರೆ. ೮, ೯, ೧೦ನೇ ತರಗತಿಯವರೆಗೆ ನಡೆದ ೪೦೦ ಮೀಟರ್ ರಿಲೇ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಕಲ್ಲುಗುಂಡಿ ಸವೆರಪುರ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಕಲ್ಲುಗುಂಡಿ ಆರ್ ಎಂ ಎಸ್ ಎ ಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸವೇರಪುರ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಆರ್ ಎಂ ಎಸ್ ಎ ಕಲ್ಲುಗುಂಡಿ ಶಾಲೆ ದ್ವಿತೀಯ, ಮುಕ್ತ ೧೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸವೆರಪುರ ಆಂಗ್ಲ ಮಾಧ್ಯಮ ಶಾಲೆಯ ಮಿಲನ್ ಪ್ರಥಮ, ಸುಜನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸವೇರಪುರ ಶಾಲೆಯ ನಿಶಾ ಎ ಎಸ್ ಪ್ರಥಮ, ಫಾತಿಮಾ ರೈಶಾ ದ್ವಿತೀಯ, ಮುಕ್ತ ೪೦೦ ಮೀಟರ್ ರಿಲೇಸ್ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸವೇರಪುರ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಸಂಪಾಜೆ ಪದವಿ ಪೂರ್ವ ಕಾಲೇಜು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸವೇರಪುರ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಸಂಪಾಜೆ ಪದವಿ ಪೂರ್ವ ಕಾಲೇಜು ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಸಾಂಸ್ಕೃತಿಕ ಸ್ಪರ್ಧೆ:
ಶೋಭಾನೆ ಸ್ಪರ್ಧೆಯಲ್ಲಿ ಸಂಪಾಜೆ ಸೊಸೈಟಿ ಪ್ರಥಮ, ಮಂಡೆಕೋಲು ಸೊಸೈಟಿ ದ್ವಿತೀಯ, ನೇಜಿ ಪಾಡ್ದಾನ ಸ್ಪರ್ಧೆಯಲ್ಲಿ ಸಂಪಾಜೆ ಸೊಸೈಟಿ ಪ್ರಥಮ, ಮಂಡೆಕೋಲು ಸೊಸೈಟಿ ದ್ವಿತೀಯ, ರೈತಗೀತೆ ಸ್ಪರ್ಧೆಯಲ್ಲಿ ಮಂಡೆಕೋಲು ಸೊಸೈಟಿ ಪ್ರಥಮ, ಹರಿಹರ ಕೊಲ್ಲಮೊಗ್ರಸೊಸೈಟಿ ದ್ವಿತೀಯ, ಸಂಪಾಜೆ ಸೊಸೈಟಿ ತೃತೀಯ, ಒಂದರಿಂದ ಏಳನೇ ತರಗತಿಯವರೆಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಆರ್ ಎಂ ಎಸ್ ಎ ಸಂಪಾಜೆ ಶಾಲೆಯ ಯಶಸ್ ಡಿ.ಬಿ. ಪ್ರಥಮ, ಬಾಲಕಿಯರ ವಿಭಾಗದಲ್ಲಿ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ರಚನಾ ಹೆಚ್. ಪ್ರಥಮ, ಸಂಪಾಜೆ ಆರ್ ಎಂ ಎಸ್ ಎ ಶಾಲೆಯ ಸೋಮಿ ಜ್ಯೋಶ್ನಿ ಫೆರ್ನಾಂಡಿಸ್ ದ್ವಿತೀಯ, ಒಂದರಿಂದ ಏಳನೇ ತರಗತಿಯವರೆಗೆ ನಡೆದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸವೆರಪುರ ಶಾಲೆಯ ಸಾತ್ವಿಕ್ ಎನ್.ಹೆಚ್. ಪ್ರಥಮ, ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಹಮ್ಮದ್ ಸುಫಿಯಾನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಮಾರುತಿ ಶಾಲೆಯ ದೃತಿ ಕೀಲಾರು ಪ್ರಥಮ, ಸವೇರಪುರ ಶಾಲೆಯ ಚೈತನ್ಯ ಎಸ್ ಜೆ. ದ್ವಿತೀಯ,
ಲಾವಣಿ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಆರ್‌ಎಂಎಸ್‌ಎ ಸಂಪಾಜೇ ಶಾಲೆಯ ಯತಿನ್ ಪ್ರಥಮ, ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಹಮ್ಮದ್ ಸುಫಿಯಾನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಮಾರುತಿ ಶಾಲೆಯ ದೃತಿ ಕೀಲಾರು ಪ್ರಥಮ, ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಫಾಯಿದ ದ್ವಿತೀಯ, ಒಂದರಿಂದ ಏಳನೇ ತರಗತಿಯವರೆಗೆ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಗೂನಡ್ಕ ಮಾರುತಿ ಶಾಲೆಯ ತಶ್ವಿಕ್ ಎಂ ಪ್ರಥಮ, ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಲಿಖಿತ್ ಕೆ.ಡಿ. ಮತ್ತು ಸವೇರಪುರ ಹಿರಿಯ ಪ್ರಾಥಮಿಕ ಶಾಲೆಯ ನಮ್ರತ್ ಎಸ್. ದ್ವಿತೀಯ,, ಬಾಲಕಿಯರ ವಿಭಾಗದಲ್ಲಿ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಖುಷಿ ಪ್ರಥಮ, ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಯಷ್ಮಿತಾ ಎಂ. ಮತ್ತು ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪಿಯಾಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಒಂದರಿಂದ ಏಳನೇ ತರಗತಿಯವರೆಗೆ ಎಲ್ಲಾ ಶಾಲೆಗಳಿಗೆ ನಡೆದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಗೂನಡ್ಕ ಶಾರದಾ ಶಾಲೆಯ ಮಹಮದ್ ಸೂಫಿಯಾನ್ ಪ್ರಥಮ, ಸವೇರಪುರ ಶಾಲೆಯ ಸಾತ್ವಿಕ್ ಎನ್. ಹೆಚ್. ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಮಾರುತಿ ಶಾಲೆಯ ಧೃತಿ ಕೀಲಾರು ಮತ್ತು ಆರ್ ಎಂ ಎಸ್ ಎ ಸಂಪಾಜೇ ಶಾಲೆಯ ಹಂಶಿಕಾ ಪ್ರಥಮ, ಗೂನಡ್ಕ ಶಾರದಾ ಶಾಲೆಯ ಶಿಫಾನ ಮತ್ತು ಫಾಹಿದ ದ್ವಿತೀಯ, ೧-೭ ಏಳನೇ ತರಗತಿಯ ಎಲ್ಲಾ ಶಾಲೆಗಳಿಗೆ ನಡೆದ ಲಾವಣಿ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಮಾರುತಿ ಶಾಲೆಯ ದೃತಿ ಕಿಲಾರು ಪ್ರಥಮ, ಸುಳ್ಯ ಸ್ನೇಹ ಶಾಲೆಯ ಕಾವ್ಯ ಕೆ.ಪಿ. ದ್ವಿತೀಯ, ಒಂದರಿಂದ ಏಳನೇ ತರಗತಿಯವರೆಗೆ ಎಲ್ಲಾ ಶಾಲೆಗಳಿಗೆ ನಡೆದ ಜಾನಪದ ಗೀತೆ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಆರ್ ಎಂ ಎಸ್ ಎ ಸಂಪಾಜೇ ಶಾಲೆಯ ವಿಕ್ಯಾತ್ ಪ್ರಥಮ, ಯತಿನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಮಾರುತಿ ಶಾಲೆಯ ಧೃತಿ ಕಿಲಾರು ಪ್ರಥಮ, ಧೃತಿ ಕೆ. ಪಿ. ದ್ವಿತೀಯ, ೮- ೧೦ನೇ ತರಗತಿಯವರೆಗೆ ಎಲ್ಲಾ ಶಾಲೆಗಳಿಗೆ ನಡೆದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸಂಪಾಜೆ ಕಾಲೇಜಿನ ದಿವಾಕರ ಪಿ ಸಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಆರ್ ಎಂ ಎಸ್ ಎ ಸಂಪಾಜೇ ಶಾಲೆಯ ಜಶ್ಮಿತಾ ಸಿ.ಜಿ. ಪ್ರಥಮ, ಸಂಪಾಜೆ ಕಾಲೇಜಿನ ಪವಿತ್ರ ಆರ್. ದ್ವಿತೀಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ದಿವಾಕರ ಪಿಸಿ ಸಂಪಾಜೇ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಸಂಪಾಜೆ ಕಾಲೇಜಿನ ಪವಿತ್ರ ಆರ್. ಪ್ರಥಮ, ಆರ್ ಎಂ ಎಸ್ ಎ ಸಂಪಾಜೇ ಶಾಲೆಯ ಜಶ್ಮಿತಾ ಸಿ.ಜಿ. ದ್ವಿತೀಯ ಬಹುಮಾನ ಗಳಿಸಿದ್ದಾರೆ.
ಎಂಟರಿಂದ ೧೦ನೇ ತರಗತಿಯ ವರೆಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸವೇರಪುರ ಶಾಲೆಯ ವಿಷ್ಣು ನಂದನ್ ಪ್ರಥಮ, ರಕ್ಷಿತ್ ಕೆ.ಪಿ. ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಆರ್‌ಎಂಎಸ್ ಎ ಸಂಪಾಜೆ ಶಾಲೆಯ ಯಶಸ್ವಿನಿ ಎ. ಎಚ್. ಪ್ರಥಮ, ಸವೇರಪುರ ಶಾಲೆಯ ಹಿತಾಶ್ರೀ ಎ. ಎಸ್. ದ್ವಿತೀಯ, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಮಹಮ್ಮದ್ ಸಿಮಕ್ ತೆಕ್ಕಿಲ್ ಪ್ರಥಮ, ಉಫೈಫ್ ಟಿ.ಯು. ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಆರ್‌ಎಂಎಸ್ ಎ ಸಂಪಾಜೆ ಶಾಲೆಯ ಜಸ್ಮಿತ ಪ್ರಥಮ, ಕಾವ್ಯಶ್ರೀ ದ್ವಿತೀಯ, ಎಂಟರಿಂದ ೧೦ನೇ ತರಗತಿಯ ವರೆಗಿನ ಲಾವಣಿ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸವೆರಪುರ ಶಾಲೆಯ ಮಹಮ್ಮದ್ ಹಿಶಾಮ್ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಸವೇರಪುರ ಶಾಲೆಯ ಸಂಜನಾ ಎಂ. ಎಸ್. ಪ್ರಥಮ, ಎಂ.ಕೆ. ದ್ವಿತೀಯ, ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸವೇರಪುರ ಶಾಲೆಯ ಹೃತಿಕ್ ಡಿ. ಯು. ಪ್ರಥಮ, ಆರ್‌ಎಂಎಸ್ ಎ ಸಂಪಾಜೆ ಶಾಲೆಯ ಅಜಿತ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸವೇರ ಪುರ ಶಾಲೆಯ ದಿಶಾ ಬಿ ವೈ ಪ್ರಥಮ ಬಹುಮಾನ ಗಳಿಸಿದ್ದಾರೆ.