ಜ.11: ಸುಳ್ಯ ಚೆನ್ನಕೇಶವ ದೇವರ ರಥೋತ್ಸವದ ಪ್ರಯುಕ್ತ ಅದ್ದೂರಿ ಸಂಗೀತ ರಸಮಂಜರಿ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ವಾಷ್ಠರ್ ಫೈವ್ ಸ್ಟಾರ್ ಆರ್ಕೆಸ್ಟ್ರಾ ಮತ್ತು ಸಪ್ತಸ್ವರ ಮೆಲೊಡೀಸ್ ಸುಳ್ಯ ಬಳಗದ ಆಶ್ರಯದಲ್ಲಿ ಜ.11. ರಂದು ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಮ್ಯೂಸಿಕಲ್ ನೈಟ್- 2023 ಅದ್ದೂರಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು. ಗಾಯಕ ಭೀಮರಾವ್ ವಾಷ್ಠರ್ ಮತ್ತು ಅರುಣ್ ಜಾದವ್ ಕೇರ್ಪಳ ರವರ ನೇತೃತ್ವದಲ್ಲಿ ಕರ್ನಾಟಕ ಮತ್ತು ಕೇರಳ ಭಾಗದ ಖ್ಯಾತ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7.30 ಕ್ಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನಡೆಯಲಿದೆ.