ಕಲ್ಚೆರ್ಪೆಯಲ್ಲಿ ನಿರ್ಮಾಣಗೊಂಡಿರುವ ಗ್ಯಾಸಿಫಿಕೇಶನ್ ಯಂತ್ರ ಉದ್ಘಾಟನೆ,

0

ಸುಳ್ಯ ನಗರ ಪಂಚಾಯತ್ ನ ಪ್ರಯೋಗ ರಾಜ್ಯಕ್ಕೆ ಮಾದರಿ : ಸುನಿಲ್ ಕುಮಾರ್‌

ಸುಳ್ಯ ನಗರ ಪಂಚಾಯತ್ ಕಲ್ಚೆರ್ಪೆ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿರುವ ಗ್ಯಾಸಿಫಿಕೇಶನ್ ಯಂತ್ರದ ಉದ್ಘಾಟನೆಯನ್ನು ಇಂಧನ ಸಚಿವ ವಿ.ಸುನಿಲ್ ಕುಮಾರ್ ನೆರವೇರಿಸಿದರು. ಒಣ ಕಸದಿಂದ ವಿದ್ಯುತ್ ಉತ್ಪತ್ತಿ ಆಗುವುದಾದರೆ ಅದೊಂದು ದೊಡ್ಡ ಸಾಧನೆ. ಸುಳ್ಯ‌ನಗರ ಪಂಚಾಯತ್ ನ ಈ ಪ್ರಯೋಗ ರಾಜ್ಯಕ್ಕೆ ಮಾದರಿ. ಸರಕಾರ ಮುಂದೆ ಈ ಅನುಭವವನ್ನು ಯಾವ ರೀತಿ ತೆಗೆದುಕೊಳ್ಳಬೇಕೆಂದು ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೀನುಗಾರಿಕಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ,ಪರಿಸರ ತಜ್ಞ, ಉದ್ಯಮಿ ಆರ್.ಕೆ. ನಾಯರ್, ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ತಹಶೀಲ್ದಾರ್ ಅನಿತಾಲಕ್ಷ್ಮಿ, ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಘಾಯಿ‌ ಸಮಿತಿ ಅಧ್ಯಕ್ಷೆ ಶೀಲಾ ಅರುಣ್ ಕುರುಂಜಿ, ವಿಪಕ್ಷ ನಾಯಕ ಬಾಲಕೃಷ್ಣ ಭಟ್ ಕೊಡೆಂಕಿರಿ, ಎಂ.ವೆಂಕಪ್ಪ ಗೌಡ, ಸದಸ್ಯರುಗಳಾದ ಬಾಲಕೃಷ್ಣ ರೈ ದುಗಲಡ್ಕ, ರಿಯಾಜ್ ಕಟ್ಟೆಕಾರ್, ಸುಧಾಕರ ಕುರುಂಜಿಭಾಗ್, ಪ್ರವಿತಾ ಪ್ರಶಾಂತ್, ಕಿಶೋರಿ ಶೇಟ್, ರೋಹಿತ್ ಕೊಯಿಂಗೋಡಿ, ನಾರಾಯಣ ಶಾಂತಿನಗರ, ಸುಶೀಲ ಕಲ್ಲುಮುಟ್ಲು, ಬುದ್ಧ ನಾಯ್ಕ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಡೇವಿಡ್ ಧೀರಾ ಕ್ರಾಸ್ತ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಆಲೆಟ್ಟಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಭಟ್, ಜಗದೀಶ ಸರಳಿಕುಂಜ, ಸುನಿಲ್ ಕೇರ್ಪಳ, ಸುಭೋದ್ ಶೆಟ್ಟಿ ಮೇನಾಲ ಇದ್ದರು.

ಪೆಟ್ರಿಕೋರ್ ಇಕೋ ಇನ್ನೋವೆಷನ್ಸ್ ಸಂಸ್ಥೆ ನಿರ್ದೇಶಕ ವೀರಪ್ಪ ವಿ ಪಟ್ಟಣಶೆಟ್ಟಿಯವರು ಗ್ಯಾಸಿಫಿಕೇಶನ್ ಯಂತ್ರದ ಮಾಹಿತಿ ನೀಡಮೇನಾಲ, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ, ಅಶೋಕ್ ಪೀಚೆ ಮೊದಲಾದವರಿದ್ದರು.
ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಸ್ವಾಗತಿಸಿದರು.
ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ವಂದಿಸಿದರು.