ತೆಕ್ಕಿಲ್ ಮಾದರಿ ಸಮೂಹ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ

0

ತೆಕ್ಕಿಲ್ ಮಾದರಿ ಸಮೂಹ ಶಿಕ್ಷಣ ಸಂಸ್ಥೆ ಗೂನಡ್ಕ ಇಲ್ಲಿನ 17 ನೆಯ ವಾರ್ಷಿಕೋತ್ಸವವನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಳ್ಯದ ಆರ್ ಎಫ್ ಒ ಗಿರೀಶ್ ಅವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಶಾಲೆಯು ಸದಾ ಏಳಿಗೆಯನ್ನು ಕಾಣಲಿ, ಹಳ್ಳಿಯಲ್ಲಿನ ಈ ಶಾಲೆ ಉತ್ತಮ ಪರಿಸರ ಹೊಂದಿದ್ದು ಕಲಿಕೆಗೆ ಪೂರಕ ಎಂದರು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಶ್ರೀ ಟಿ ಯಂ ಶಹೀದ್ ತೆಕ್ಕಿಲ್ ರವರು ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ ಎಂಬ ಭರವಸೆಯನ್ನಿತ್ತರು.

ಮುಖ್ಯ ಅತಿಥಿಗಳಾದ
ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ಟರ್ ಹಾಗೂ ನಿಕಟಪೂರ್ವ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಾಕ್ಷಿಯವರು ಗತ ನೆನಪುಗಳನ್ನು ಮೆಲಕು ಹಾಕುತ್ತ ವಿದ್ಯಾರ್ಥಿ ಗಳು, ಪೋಷಕರು, ಅಧ್ಯಾಪಕ ವೃಂದ ಮತ್ತು ಆಡಳಿತ ಮಂಡಳಿಗಳು ವಿಶ್ವಾಸ ದಿಂದ ಕೆಲಸ ಮಾಡಿದರೆ ಸಂಸ್ಥೆಯು ಬೆಳೆಯುತ್ತದೆ ಎಂದರು ಶಾಲೆ ಸದಾ ಏಳಿಗೆಯನ್ನು ಕಾಣಲೆಂದು ಹಾರೈಸಿದರು. ಶಿಕ್ಷಕ ಪೋಷಕ ಸಂಘದ ಅಧ್ಯಕ್ಷ ಶ್ರೀ ದಿನಕರ ಸಣ್ಣಮನೆ ಇವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ದರು .

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಕಾರ್ಯಕ್ರಮಕ್ಕೆಶುಭ ಹಾರೈಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಬುಸಾಲಿ ಗೂನಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇರ್ಫಾನ್ ಪೇರಡ್ಕ, ವಿದ್ಯಾರ್ಥಿ ನಾಯಕ ಉಫೈಫ್ ಟಿ ಯು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ರಹೀಂ ಬೀಜದಕಟ್ಟೆ ಸ್ವಾಗತಿಸಿದರು.
ತೆಕ್ಕಿಲ್ ಶಾಲಾ ಮುಖ್ಯೋಪಾಧ್ಯಾಯಿನಿ ವಾಣಿ. ಕೆ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ಉಷಾಲತಾ ವಂದಿಸಿದರು. ಶಿಕ್ಷಕಿ ಸೌಮ್ಯ ಪಿ.ಬಿ ಕಾರ್ಯಕ್ರಮವನ್ನು ನಿರೂಪಿಸಿದರು.
ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.