ಅಂತರಾಷ್ಟ್ರೀಯ ಯೋಗ ಸ್ಪರ್ಧೆ : ಪುರುಷೋತ್ತಮ ದೇರಾಜೆಯವರಿಗೆ ಪ್ರಶಸ್ತಿ

0

ಜನವರಿ ೪ರಿಂದ ೭ರ ವರೆಗೆ ಪಾಂಡಿಚೇರಿಯಲ್ಲಿ ಜರುಗಿದ ೨೮ನೇ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪುರುಷೋತ್ತಮ ದೇರಾಜೆಯವರು ೨ ನೇ ಸ್ಥಾನ ಗಳಿಸಿದ್ದು, ಪಾಂಡಿಚೇರಿ ಸಿಎಂ. ರಂಗ ಸ್ವಾಮಿಯರಿಂದ ಪ್ರಶಸ್ತಿ ಸ್ವೀಕರಿಸಿದರು. ಇವರು ದೇರಾಜೆ ಸಣ್ಣಯ್ಯ ಗೌಡ ಹಾಗೂ ಸರಸ್ವತಿ ದಂಪತಿಯ ಪುತ್ರ.

ಪುರುಷೋತ್ತಮರವರ ಶಿಷ್ಯಂದಿರಾದ ಚೇತನ್ ಕುಪರ್ಣಿ ಹಾಗೂ ಪ್ರಕಾಶ್ ರವರು ಕೂಡಾ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುರುಷೋತ್ತಮ ದೇರಾಜೆಯವರು ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಯೋಗ ಕೇಂದ್ರವನ್ನು ಸ್ಥಾಪಿಸಿ ಹಲವು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಹಾಗೂ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.