ಜೇಸಿಐ ಪಂಜ ಪಂಚಶ್ರೀ ಪದಗ್ರಹಣ ಸಮಾರಂಭ, ನೂತನ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ, ಉತ್ತಮ ಸಮಾಜ ನಿರ್ಮಿಸುವ ಸಂಸ್ಥೆ ಜೇಸಿ: ಪಿ .ಸಿ ಜಯರಾಮ, ರಜತ ರಶ್ಮಿಅದ್ಬುತ ಕಾರ್ಯಕ್ರಮಮಾದರಿಯಾಗಿದೆ:JFDಪುರುಷೋತ್ತಮ ಶೆಟ್ಟಿ

0

ಜೇಸಿಐ ಪಂಜ ಪಂಚಶ್ರೀ ಇದರ 26 ನೇ ವರುಷದ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ್ ಆಕ್ರಿಕಟ್ಟೆ ಮತ್ತು ಘಟಕಾಡಳಿತ ಮಂಡಳಿಗೆ ಪದಗ್ರಹಣ ಸಮಾರಂಭ ಜ.11ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರುಗಿತು.

ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ಪದಗ್ರಹಣ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪಿ.ಸಿ.ಜಯರಾಮ ಮಾತನಾಡಿ “ಜೇಸಿ ಅಂತರಾಷ್ಟ್ರೀಯ ಸಂಸ್ಥೆ.ವ್ಯಕ್ತಿತ್ವ ವಿಕಾಸನ ಗೊಳಿಸುವ ಮೂಲಕ ಉತ್ತಮ ಸಮಾಜ ನಿರ್ಮಿಸುವ ಸಂಸ್ಥೆ. ಪಂಜ ಪಂಚಶ್ರೀ ಜೇಸಿಐ ಕ್ರಿಯಾಶೀಲ ಘಟಕವಾಗಿ ಬೆಳೆದು ಬಂದಿದೆ.” ಎಂದು ಅವರು ಹೇಳಿದರು.

ಮುಖ್ಯ ಅತಿಥಿ, ಪದಗ್ರಹಣ ಅಧಿಕಾರಿಯಾಗಿ ವಲಯ 15 ರ ವಲಯಾಧ್ಯಕ್ಷ JFDಪುರುಷೋತ್ತಮ ಶೆಟ್ಟಿ ಯವರು ಮಾತನಾಡಿ” ಜೇಸಿಐ ಪಂಜ ಪಂಚಶ್ರೀ ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತಾ ಮನೆ ಮಾತಾಗಿರುವ ಘಟಕ.ಇಪ್ಪತ್ತೈದನೇ ವರುಷದ ಅಧ್ಯಕ್ಷರಾಗಿ ಶಿವಪ್ರಸಾದ್ ಹಾಲೆಮಜಲುರವರು ಅತ್ಯಂತ ಯಶಸ್ವಿಯಾಗಿ ಮುನ್ನೆಡಿಸಿದ್ದಾರೆ.ರಜತ ರಶ್ಮಿ ಅದ್ಬುತ ಕಾರ್ಯಕ್ರಮವಾಗಿ ಇತರ ಘಟಕಕ್ಕೆ ಮಾದರಿಯಾಗಿದೆ.ಮುಂದೆ ಲೋಕೇಶ್ ಆಕ್ರಿಕಟ್ಟೆ ರವರ ಅಧ್ಯಕ್ಷತೆಯಲ್ಲಿ ಘಟಕವು ಯಶಸ್ವಿಯಾಗಿ ಮುನ್ನಡೆಯಲಿ.”ಎಂದು ಶುಭ ಹಾರೈಸಿದರು.

ಅತಿಥಿ ವಲಯ ಉಪಾಧ್ಯಕ್ಷ ಅಜಿತ್ ಕುಮಾರ್ ರೈ ಶುಭಹಾರೈಸಿದರು. ಘಟಕದ ನಿಕಟಪೂರ್ವಾಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ, ಕಾರ್ಯದರ್ಶಿ ಕೌಶಿಕ್ ಕುಳ, ಸ್ಥಾಪಕಾಧ್ಯಕ್ಷದೇವಿಪ್ರಸಾದ್ ಜಾಕೆ, ನೂತನ ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ನೂತನವಾಗಿ ಸೇರ್ಪಡೆ ಗೊಂಡ ಸದಸ್ಯರಿಗೆ ಪದಗ್ರಹಣ ಅಧಿಕಾರಿ, ವಲಯ 15 ರ ವಲಯಾಧ್ಯಕ್ಷ JFDಪುರುಷೋತ್ತಮ ಶೆಟ್ಟಿ ಯವರು ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು.ಚರಣ್ ದೇರಪ್ಪಜ್ಜನಮನೆ ಜೇಸಿ ವಾಣಿ ನುಡಿದರು. ಶಿವಪ್ರಸಾದ್ ಹಾಲೆಮಜಲು ಸ್ವಾಗತಿಸಿದರು. ವಾಚಣ್ಣ ಕೆರೆಮೂಲೆ ವಂದಿಸಿದರು.