ದಿ.ಯಶೋಧ ಕೆದಂಬಾಡಿಯವರಿಗೆ ಶ್ರದ್ಧಾಂಜಲಿ‌ ಕಾರ್ಯಕ್ರಮ

0

ಉಬರಡ್ಕ ಮಿತ್ತೂರು ಗ್ರಾಮದ ಕೆದಂಬಾಡಿ ದಿ.ರಾಮಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಯಶೋಧರವರು ಜ.2 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ಉತ್ತರಕ್ರಿಯಾದಿ ಸದ್ಗತಿ ಕಾರ್ಯಕ್ರಮವು ಜ.12 ರಂದು ಕೆದಂಬಾಡಿ ಮನೆಯಲ್ಲಿ ನಡೆಯಿತು.

ಹೇಮನಾಥ ಕೋಡ್ತುಗುಳಿ ಮತ್ತು ದುರ್ಗಾಕುಮಾರ್ ನಾಯರ್ ಕೆರೆ ಮೃತರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಪುತ್ರರಾದ ತೀರ್ಥರಾಮ ಕೆದಂಬಾಡಿ, ಕಮಲೇಶ ಕೆದಂಬಾಡಿ ,ಪುತ್ರಿಯರಾದ ಶ್ರೀಮತಿ ವಸಂತಿ ಸೀತಾರಾಮ ಸಂಪ್ಯಾಡಿ , ಶ್ರೀಮತಿ ಪ್ರೇಮ ಹೇಮನಾಥ ಕೋಡ್ತುಗುಳಿ, ಅಳಿಯಂದಿರು,ಸೊಸೆಯಂದಿರು,ಕುಟುಂಬಸ್ಥರು,ಮೊಮ್ಮಕ್ಕಳು ಉಪಸ್ಥಿತರಿದ್ದರು.ಆಗಮಿಸಿದ ನೂರಾರು ಜನರು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.