ಸ್ನೇಹದಲ್ಲಿ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ

0

ಪ್ರಕೃತಿಗಿಂತ ದೊಡ್ಡ ಗುರು ಬೇರೆ ಇಲ್ಲ : ಡಾ. ಆರ್.ಕೆ. ನಾಯರ್

“ಪ್ರಕೃತಿ ನಮಗೆ ಸರ್ವಸ್ವವನ್ನು ನೀಡಿದೆ. ಪ್ರಕೃತಿಯೇ ಅತಿ ಶಿಕ್ಷಕ. ಅದು ನಮಗೆ ಸ್ಪೂರ್ತಿ ಮತ್ತು ಹುಮ್ಮಸ್ಸನ್ನು ನೀಡುತ್ತದೆ. ಎಲ್ಲರೂ ಭೂಮಿಯ ಸಂರಕ್ಷಕರಾಗಬೇಕು. ನಮ್ಮಲ್ಲಿ ಹುದುಗಿರುವ ಆಸಕ್ತಿ ಮತ್ತು ಪ್ರತಿಭೆಯನ್ನು ಹೊರ ತರುವ ಕೆಲಸ ನಮ್ಮಿಂದಾಗಬೇಕು” ಎಂದು ಸ್ಮೃತಿವನದ ರೂವಾರಿ ಡಾ. ರಾಧಾಕೃಷ್ಣ ನಾಯರ್ ಹೇಳಿದರು.

ಅವರು ಜ. 10ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪರಿಸರ ಸಂರಕ್ಷಣೆಯ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ, ಬಹುಮಾನದ ಪ್ರಾಯೋಜಕರಾಗಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆಯವರು ವಿದ್ಯಸ್ರ್ಥಿಗಳ ಪ್ರಬಂಧಗಳ ವಿಶ್ಲೇಷಣೆಯೊಂದಿಗೆ ಬಹುಮಾನ ವಿಜೇತರನ್ನು ಘೋಷಿಸಿದರು. ಜಗತ್ ಪಿ ವಿ (ಪ್ರಥಮ ₹೨೫೦೦/-), ಸಂದೇಶ್ ಕೆ ಆರ್ (ದ್ವಿತೀಯ ₹೧೫೦೦/-), ಜ್ಞಾನವಿ ಪಿ ಜೆ (ತೃತೀಯ ₹೧೦೦೦/-) ಬಹುಮಾನ ಪಡೆದುಕೊಂಡರು. ವೇದಿಕೆಯಲ್ಲಿ ಉಪಸ್ಥಿತರಿದ್ದ
ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಸ್ವಾಗತಿಸಿದರು.


ಶಾಲಾ ಶಿಕ್ಷಕ ದೇವಿಪ್ರಸಾದ ಜಿ ಸಿ ವಂದಿಸಿದರು..
ಶಿಕ್ಷಕಿ ಸವಿತಾ ಎಂ ನಿರೂಪಿಸಿದರು.