ಕೆ ವಿ ಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

0


ಜ.12 ರಂದು ಕೆವಿಜಿ ಅಮರ ಜ್ಯೋತಿಪದವಿ ಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಆದರ್ಶಗಳ ಸ್ಮರಣೆಯೊಂದಿಗೆ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ನರೇನ್ ಸ್ವಾಗತ ಕೋರಿದರು.ಅಂಜಲಿ ಮತ್ತು ತಂಡದವರು ಯುವ ಪ್ರೇರಣ ಹಾಡನ್ನು ಹಾಡಿದರು. ರಾಷ್ಟ್ರೀಯ ಯುವ ದಿನದ ಪ್ರಾಮುಖ್ಯತೆಯನ್ನು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಥಮ ಶೇಖರ್ ಮನವರಿಕೆ ಮಾಡಿದರು. ದ್ವಿತೀಯ ಪಿಯುಸಿ ಪ್ರಜ್ಞ ವಂದನಾರ್ಪಣೆಯನ್ನು ಸಲ್ಲಿಸಿದರು. ಶ್ರೀಮತಿ ಮಲ್ಲಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ಅವರು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯುವ ದಿನದ ಶುಭಾಶಯ ತಿಳಿಸಿದರು. ಈ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್, ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.