ಜಾಲ್ಲೂರು : ಅಡ್ಕಾರ್ ಜುಮ್ಮಾ ಮಸೀದಿಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಸ್ವಲಾತ್ ವಾರ್ಷಿಕ

0

ಮುಹ್ಯದ್ದೀನ್ ಜುಮ್ಮಾ ಮಸೀದಿ ಜಾಲ್ಸೂರು ಅಡ್ಕಾರ್ ಇದರ ವಸತಿ ಸಮುಚ್ಚಯದ ನೂತನ ಕಟ್ಟಡ ಉದ್ಘಾಟನ‌ ಸಮಾರಂಭ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮ ಜ.12 ರಂದು ನಡೆಯಿತು.
ವಸತಿ ಕಟ್ಟಡವನ್ನು ಜಾಲ್ಸೂರು ಜಮಾಯತ್ ಕಮಿಟಿ ಗೌರವಧ್ಯಕ್ಷರಾದ ಸಯ್ಯದ್ ಕೆ ಎಸ್ ಆಟಕೋಯ ತಂಙಳ್ ಉದ್ಘಾಟಿಸಿ ದುವಾಶಿರ್ವಚನ ನೀಡಿದರು.
ಜಾಲ್ಸೂರು ಜಮಾಯತ್ ಕಮಿಟಿ ಅಧ್ಯಕ್ಷ ಉಸ್ಮಾನ್ ,ಉಪಾಧ್ಯಕ್ಷ ಜಿ.ಪಿ ಸಂಶುದ್ದೀನ್,ಅನ್ವರ್ ಪಂಜಿಕ್ಕಲ್ಲು, ಕಾರ್ಯದರ್ಶಿ ನಜೀಬ್,ಮಾಜಿ ಅಧ್ಯಕ್ಷರುಗಳಾದ ಎನ್ ಎಂ ಕುಂಞಿ, ಹಾಜಿ ಇಬ್ರಾಹಿಂ ಕದಿಕಡ್ಕ,ಹಾಜಿ ಇಬ್ರಾಹಿಂ ಕತ್ತಾರ್,ಹಸನ್ ಅಡ್ಕಾರ್,ಎ ಎಂ ಇಬ್ರಾಹಿಂ,ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮಜೀದ್ ನಡುವಡ್ಕ, ನ್ಯಾಯವಾದಿ ಅಬೂಭಕ್ಕರ್ ಅಡ್ಕಾರ್, ಮೊದಲಾದವರು ಉಪಸ್ಥಿತರಿದ್ದರು. ಜಾಲ್ಸೂರು ಜುಮ್ಮಾ ಮಸೀದಿ ಖತೀಬರಾದ ಅಬ್ದುಲ್‌ ಅಜೀಜ್ ಬಾಖವಿ ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ನೇತ್ರತ್ವ ವಹಿಸಿದರು.


ಜಮಾಯತ್ ಕಮಿಟಿ ಪದಾಧಿಕಾರಿಗಳು, ಮದರಸ ಉಸ್ತಾದರುಗಳು,ಅಡ್ಕಾರ್ ಜಾಲ್ಸೂರು ಜಮಾಯತ್ ಬಾಂಧವರು ಭಾಗವಹಿಸಿದರು ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಊರೂಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಯ್ಯದ್ ಕುಂಬೋಳ್ ತಂಙಳ್ ಬಿಡುಗಡೆಗೊಳಿಸಿದರು.
ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕದಿಕಡ್ಕ,ಕಾರ್ಯದರ್ಶಿ ಕಯ್ಯೂಮ್,ಮೊದಲಾದವರು ಉಪಸ್ಥಿತರಿದ್ದರು