ಜ.23-24, ಆಲೆಟ್ಟಿ: ಬಾಳೆಹಿತ್ಲು ತರವಾಡು ದೈವಸ್ಥಾನದಲ್ಲಿ ಶ್ರೀ ದೈವಗಳ ಧರ್ಮ ನಡಾವಳಿ

0

ಆಲೆಟ್ಟಿ ಗ್ರಾಮದ ಬಾಳೆಹಿತ್ಲು ತರವಾಡು ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ಧರ್ಮ ದೈವ ಹಾಗೂ ಉಪ ದೈವಗಳ ಧರ್ಮ ನಡಾವಳಿಯು ಜ.23 ಮತ್ತು 24 ರಂದು ನಡೆಯಲಿರುವುದು.
ಜ.23 ರಂದು ಬೆಳಗ್ಗೆ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ರಾತ್ರಿ ಶ್ರೀ ವಿಷ್ಣುಮೂರ್ತಿ ಧರ್ಮ ದೈವ ಹಾಗೂ ಉಪ ದೈವಗಳ ಕೋಲ ನಡೆಯಲಿದೆ. ಮರುದಿನ ಬೆಳಗ್ಗೆ ರಕ್ತೇಶ್ವರೀ ಪಿಲಿಭೂತ ದೈವಗಳ ಕೋಲ ಅಪರಾಹ್ನ ಶ್ರೀ ವಿಷ್ಣುಮೂರ್ತಿ ಧರ್ಮ ದೈವ ಮತ್ತು ಪಾಷಾಣಮೂರ್ತಿ ದೈವಗಳ ನಡಾವಳಿ ನಡೆಯಲಿದೆ. ಸದ್ರಿ ದಿನಗಳಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯು ನಡೆಯಲಿರುವುದಾಗಿ ಆಡಳ್ತೆದಾರ ರಾಮಚಂದ್ರ ಗೌಡ ಬಾಳೆಹಿತ್ಲು ತಿಳಿಸಿರುತ್ತಾರೆ.