ಸುಳ್ಯದ ರುದ್ರಭೂಮಿಯಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಫಲಕ ಅನಾವರಣ

0

ಸುಳ್ಯದ ಕೊಡಿಯಾಲ್ ಬೈಲ್ ನಲ್ಲಿರುವ ರುದ್ರಭೂಮಿಯಲ್ಲಿ ಸುಳ್ಯ ಘಟಕದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದವರ ಕರ್ಮದ ಫಲ ಎಂಬ ಫಲಕದ ಅನಾವರಣ ಕಾರ್ಯಕ್ರಮ ನಡೆಯಿತು. ರಾಜಯೋಗಿನಿ ಬಿ.ಕೆ ಉಮಾದೇವಿಯವರು ಅಧ್ಯಕ್ಷತೆ ವಹಿಸಿ ಕರ್ಮದ ಫಲದ ಕುರಿತು ಮಾತನಾಡಿದರು. ಪಿ ಡಿ ಓ ವಿದ್ಯಾಧರ್ ಕುಡೆಕಲ್ಲುರವರು ಉದ್ಹಾಟಿಸಿದರು. ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆಯ ಪ್ರಧಾನ ವರದಿಗಾರರ ಹರೀಶ್ ಬಂಟ್ವಾಳ ಮತ್ತು ಸಾಹಿತಿ , ಜ್ಯೋತಿಷಿ ಎಚ್ .ಭೀಮರಾವ್ ವಾಷ್ಠರ್ ರವರು ಮುಖ್ಯ ಅತಿಥಿಗಳಾಗಿದ್ದರು. ಸಮಾಜ ಸೇವಕ ಮಂಜು ಮೇಸ್ತ್ರಿ ಮತ್ತು ರುದ್ರಭೂಮಿ ಸಹಾಯಕರಾದ ಗುರುವರವರು ಉಪಸ್ಥಿತರಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ ಉಮೇಶ್ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು . ಫಲಕಕ್ಕೆ ಪೂಜೆ ಮಾಡುವುದರ ಮೂಲಕ ಅನಾವರಣಗೊಳಿಸಲಾಯಿತು.