ಜ. 21 ಮತ್ತು 22 ರಂದು ಸುಳ್ಯದಲ್ಲಿ ಯುವಜನ ಮೇಳ : ಆಮಂತ್ರಣ ಬಿಡುಗಡೆ

0

ಸುಳ್ಯದ ಯುವಜನ ಸಂಯುಕ್ತ ಮಂಡಳಿ ನೇತೃತ್ವದಲ್ಲಿ, ಮಂಡಳಿಯ ವಠಾರದಲ್ಲಿ ಜ.೨೧ ಮತ್ತು ೨೨ ರಂದು ನಡೆಯುವ ದ.ಕ. ಜಿಲ್ಲಾ ಮಟ್ಟದ ಯುವಜನ ಮೇಳದ ಆಮಂತ್ರಣ ಪತ್ರ ಬಿಡುಗಡೆ ಜ.೧೩ ರಂದು ಸಂಜೆ ಮಂಡಳಿಯ ಸಭಾಂಗಣದಲ್ಲಿ ನಡೆಯಿತು.


ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ರು ಹಾಗೂ ಜಿಲ್ಲಾ ಯುವಜನ ಮೇಳದ ಸ್ವಾಗತ ಸಮಿತಿ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರುಗಳಾದ ದಿನೇಶ್ ಮಡಪ್ಪಾಡಿ, ದೀಪಕ್ ಕುತ್ತಮೊಟ್ಟೆ, ಶಂಕರ ಪೆರಾಜೆ, ದಿಲೀಪ್ ಬಾಬ್ಲುಬೆಟ್ಟು, ಶಿವಪ್ರಕಾಶ್ ಅಡ್ಡನಪಾರೆ, ಮನಮೋಹನ್ ಪುತ್ತಿಲ, ಹರೀಶ್ ರೈ ಉಬರಡ್ಕ, ಗೌರವಾಧ್ಯಕ್ಷ ದಯಾನಂದ ಕೇರ್ಪಳ, ಮಂಡಳಿ ಪ್ರಧಾನ ಕಾರ್ಯದರ್ಶಿ ಸಂಜಯ್ ನೆಟ್ಟಾರು, ಕೋಶಾಧಿಕಾರಿ ಮುರಳಿ ಚೊಕ್ಕಾಡಿ, ಉಪಾಧ್ಯಕ್ಷರುಗಳಾದ ವಿಜಯಕುಮಾರ್, ಪ್ರವೀಣ್ ಕುಮಾರ್ ಎ.ಎಂ, ನಿರ್ದೇಶಕ ಆರ್.ಕೆ. ಮಹಮ್ಮದ್, ನಮಿತಾ ಹಲ್ದಡ್ಕ ಉಪಸ್ಥಿತರಿದ್ದರು.