ಸುಳ್ಯ ರಂಗಮನೆಯಲ್ಲಿ ಯಕ್ಷ ರಂಗಾಯಣ ಮತ್ತು ನೀನಾಸಂ ನಾಟಕಗಳ ಪ್ರದರ್ಶನ ಉದ್ಘಾಟನೆ

0

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಇದರ ಆಶ್ರಯದಲ್ಲಿ ಯಕ್ಷ ರಂಗಾಯಣ ಮತ್ತು ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನ ಜ.13 ರಂದು ರಂಗಮನೆಯಲ್ಲಿ ಉದ್ಘಾಟನೆಗೊಂಡಿತು.


ಸಚಿವ ಎಸ್. ಅಂಗಾರ ಡೋಲು ಬಾರಿಸುವುದರ ಮೂಲಕ ನಾಟಕ ಪ್ರದರ್ಶನ ಉದ್ಘಾಟಿಸಿದರು. ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ, ನ್ಯಾಯವಾದಿ ಕೃಷ್ಣಮೂರ್ತಿ ಕೊಡೆಂಕೇರಿ ಉಪಸ್ಥಿತರಿದ್ದರು. ಜೀವನರಾಮ್ ಸುಳ್ಯ ಸ್ವಾಗತಿಸಿದರು. ಜ.13 ರಂದು ಯಕ್ಷ ರಂಗಾಯಣ ಕಾರ್ಕಳ ಇಲ್ಲಿನ ಸಂಚಾರಿ ರಂಗ ತಂಡ ಅಭಿನಯಿಸುವ, ಶಶಿರಾಜ್ ರಾವ್ ಕಾವೂರು ವಿರಚಿತ, ಜೀವನ್ ರಾಂ ಸುಳ್ಯ ನಿರ್ದೇಶನದ
‘ಪರಶುರಾಮ’ ನಾಟಕ ಪ್ರದರ್ಶನಗೊಂಡಿತು. ಜ.14 ರಂದು ನೀನಾಸಂ ತಿರುಗಾಟದ ಕಲಾವಿದರು ಅಭಿನಯಿಸುವ, ಮೂಲ: ಯೂರಿಪಿಡೀಸ್ ಹಾಗೂ ಬಿ.ಆರ್.ವೆಂಕಟರಮಣ ಐತಾಳ ನಿರ್ದೇಶಿಸಿದ
‘ ಇಫಿಜೀನಿಯಾ’ ಹಾಗೂ ಜ.15ರಂದು ರಬೀಂದ್ರನಾಥ ಠಾಗೋರ್ ವಿರಚಿತ, ಪ್ರವೀಣ್ ಎಡಮಂಗಲ ನಿರ್ದೇಶಿಸಿದ ‘ಮುಕ್ತಾಧಾರ’ ನಾಟಕಗಳು ಪ್ರದರ್ಶನಗೊಳ್ಳಲಿದೆ.