ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಪವಿತ್ರ ತೀರ್ಥ ಕೆರೆಯ ಕಾಮಗಾರಿ ಪ್ರಾರಂಭ

0


ಸಚಿವ ಎಸ್,ಅಂಗಾರರಿಂದ ಗುದ್ದಲಿ ಪೂಜೆ

ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ತೀರ್ಥ ಕೆರೆಯ ಕಾಮಗಾರಿಯ ಪ್ರಾರಂಭ ಇಂದು ನಡೆಯಿತು. ಸವಚಿವ ಎಸ್.ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.


ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಶೌರ್ಯ ವಿಪತ್ತು ನಿಂತಿಕಲ್ಲು ಘಟಕದ ಮತ್ತು ಕಲ್ಮಡ್ಕ ಘಟಕದ ಸದಸ್ಯರಿಂದ ಶ್ರಮಸೇವೆ ಮೂಲಕ ಹಾಗೂ ಸ್ಥಳೀಯ ಭಕ್ತಾಧಿಗಳಿಂದ ತೀರ್ಥ ಕೆರೆಯ ಜೀರ್ಣೋದ್ಧಾರ ಮುನ್ನುಡಿಯಾಯಿತು. ದೇವಳಧ ಪ್ರಧಾನ ಅರ್ಚಕ ಶ್ರೀ ಹರಿ ಕುಂಜೂರಾಯರ ವೈಧಿಕ ಕಾರ್‍ಯಗಳೊಂದಿಗೆ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ಯೋಗಾನಂದ ಉಳಿಲಾಡಿ, ರೂಪರಾಜ ರೈ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಗುಣವತಿ ನಾವೂರು, ಭಜನಾ ಮಂಡಳಿ ಅಧ್ಯಕ್ಷ ಸುಂದರ ಗೌಡ ಆರೆಂಬಿ, ನಾರಾಯಣ ನಾಯ್ಕ, ಮುರುಳ್ಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಧು ಪಿ.ಆರ್. ಮೋಹನ್ ದಾಸ್ ಬಳ್ಕಾಡಿ, ಮುರುಳ್ಯ ಸೊಸೈಟಿ ಅಧ್ಯಕ್ಷ ವಸಂತ ಹುದೇರಿ, ಎಡಮಂಗಲ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ, ಎಡಮಂಗಲ ಪಂಚಾಯತ್ ಅಧ್ಯಕ್ಷೆ ಗೀತಾ ಪ್ರವೀಣ್ ರೈ, ಮುರುಳ್ಯ ಪಂಚಾಯತ್ ಅಧ್ಯಕ್ಷೆ ಜಾನಕಿ ಮುರುಳ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗೀರಥಿ ಮುರುಳ್ಯ, ನಳಿನಾಕ್ಷಿ ಆಚಾರ್ಯ ಸುಳ್ಯ, ಜಯಂತ ಪುರೋಳಿ, ಮುರುಳ್ಯ ಪಂಚಾಯತ್ ಉಪಾಧ್ಯಕ್ಷೆ ವನಿತಾ ಬಾಮೂಲೆ, ಜಯಪ್ರಕಾಶ್ ರೈ ಕಲ್ಮಡ್ಕ, ದಿನೇಶ್ ಪಜಿಂಬಿಲ ಇನ್ನಿತರರು ಉಪಸ್ಥಿತರಿದ್ದರು.