ಜಾಲ್ಸೂರು ಜಿ. ಪಂ ಕ್ಷೇತ್ರದ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1.95 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

0

ಸರಕಾರದ ವಿಶೇಷ ಅನುದಾನ ಹಾಗೂ ಮಳೆ ಹಾನಿ ಯೋಜನೆ ಯಲ್ಲಿ ಐವರ್ನಾಡು ಗ್ರಾಮದ ವಿವಿಧ ರಸ್ತೆಗಳ 1.95 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿ ಗಳಿಗೆ ಸಚಿವ ಎಸ್.ಅಂಗಾರರವರು ಜ.14 ರಂದು ಕಲ್ಲೋಣಿ ಜಂಕ್ಷನ್ ನಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.
ಕಲ್ಲೋಣಿ-ದೇವರಕಾನ ರಸ್ತೆಗೆ 1.25ಕೋಟಿ
ನಿಡುಬೆ-ಕೊಚ್ಚಿ ರಸ್ತೆಗೆ 25 ಲಕ್ಷ
ಐವರ್ನಾಡು-ದೇರಾಜೆ ರಸ್ತೆಗೆ 25 ಲಕ್ಷ
ಬಾಂಜಿಕೋಡಿ-ಚೆಮ್ನೂರು ರಸ್ತೆಗೆ 10 ಲಕ್ಷ
ಪಾಲೆಪ್ಪಾಡಿ-ಉದ್ದಂಪಾಡಿ ರಸ್ತೆಗೆ 10 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.


ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಜಾಲ್ಸೂರ್ ಮಹಾಶಕ್ತಿ ಕೇಂದ್ರ ದ ಕಾರ್ಯದರ್ಶಿ ಜಯರಾಜ್ ಕುಕ್ಕೆಟ್ಟಿ, ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಆರ್.ಕೆ.ಭಟ್ ಕುರುಂಬುಡೇಲು,ಬೆಳ್ಳಾರೆ ಬೂತ್ ಸಮಿತಿ ಅಧ್ಯಕ್ಷ ಪದ್ಮನಾಭ ಬೀಡು ಗ್ರಾ.ಪಂ.ಸದಸ್ಯ ಮಣಿಕಂಠ, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ವಸಂತ್ ಉಲ್ಲಾಸ್, ವಾಸುದೇವ ಬೊಳುಬೈಲು, ಶಾಂತರಾಮ ಕಣಿಲೆಗುಂಡಿ,ಸಂಪ್ರೀತ್ ಮಿತ್ತಮೂಲೆ, ಲಕ್ಷ್ಮೀನಾರಾಯಣ ಖಂಡಿಗೆಮೂಲೆ,ಜಗನ್ನಾಥ ಆಳ್ವ, ,ಅನಂತ ಖಂಡಿಗೆಮೂಲೆ,ಶೇಖರ ಮಡ್ತಿಲ,ಜೆ.ಟಿ ವೆಂಕಪ್ಪ ಗೌಡ, ಮಹೇಶ್ ಜಬಳೆ ,ರವಿನಾಥ್ ಮಡ್ತಿಲ,ಎಲ್ಯಣ್ಣ ಗೌಡ ಕುಳ್ಳಂಪಾಡಿ, ಗ್ರಾಮಪಂಚಾಯತ್ ಸದಸ್ಯ ರಾದ ಶಶಿಕಲಾ ಕುಳ್ಳಂಪಾಡಿ,ಶರ್ಮೀಳಾ ಚೀಮುಳ್ಳು, ಗಣೇಶ್ ಕುಳ್ಳಂಪಾಡಿ, ಚರಿತ್ ಕುಳ್ಳಂಪಾಡಿ,ವಿನೋದ್ ಕುಳ್ಳಂಪಾಡಿ,ಸುರೇಶ್ ಶುಂಠಿತ್ತಡ್ಕ, ಪ್ರೇಮಚಂದ್ರ ಬೆಳ್ಳಾರೆ ಹಾಗೂ ಐವರ್ನಾಡಿನ ಗ್ರಾಮದ ಬಿಜೆಪಿ ಕಾರ್ಯಕರ್ತರು ಹಾಗೂ ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.


ದೇವರಕಾನ ಬೂತ್ ಸಮಿತಿ ಕಾರ್ಯದರ್ಶಿ ಸಂಪ್ರೀತ್ ಮಿತ್ತಮೂಲೆ ಸ್ವಾಗತಿಸಿ ಶಾಂತಾರಾಮ ಕಣಿಲೆಗುಂಡಿ ವಂದಿಸಿದರು.