ಆಲೆಟ್ಟಿ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೂರ್ವ ಭಾವಿ ಸಭೆ -ನೂತನ ಸಭಾಭವನದ
ಶಿಲಾನ್ಯಾಸಕ್ಕೆ ಸಿದ್ಧತೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಪೂರ್ವ ಭಾವಿ ಸಭೆಯು ಜ.15 ರಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ವಹಿಸಿದ್ದರು.


ಫೆ‌ .14 ರಿಂದ ಫೆ.18 ರ ವರೆಗೆ ಕಾಲಾವಧಿ ಜಾತ್ರೋತ್ಸವವು ನಡೆಯಲಿದ್ದು ಆಮಂತ್ರಣ ಪತ್ರಿಕೆ ಮುದ್ರಣದ ಕುರಿತು ವಿಚಾರ ವಿನಿಮಯ ಮಾಡಲಾಯಿತು. ಧಾರ್ಮಿಕ ಸಭೆ ಹಾಗೂ ನೂತನ ಸಭಾಭವನದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಕುರಿತು ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಅವಿರತ ಶ್ರಮವಹಿಸಿದ ಹಿರಿಯರನ್ನು ಸನ್ಮಾನಿಸುವ ಬಗ್ಗೆ ನಿರ್ಧರಿಸಲಾಯಿತು. ದೇವಸ್ಥಾನಕ್ಕೆ ಸಂಬಂಧಪಟ್ಟ ಶ್ರೀ
ಉಳ್ಳಾಕುಲು ಚಾವಡಿ ನಿರ್ಮಾಣದ ಸಿದ್ಧತೆ ಕುರಿತು ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕುಡೆಕಲ್ಲು ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರದ ಅಂತಿಮ ಹಂತದ ಕೆಲಸ ಕಾರ್ಯಗಳ ಕುರಿತು ವಿಚಾರ ವಿಮರ್ಶೆ ನಡೆಸಲಾಯಿತು. ಬ್ರಹ್ಮಕಲಶೋತ್ಸವದ ದಿನ ನಿಗದಿ ಪಡಿಸುವ ಬಗ್ಗೆ ಚಿಂತನೆ ನಡೆಸಲಾಯಿತು.


ಈ ಸಂದರ್ಭದಲ್ಲಿ
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರ ಪೈಕಿ ಶ್ರೀಪತಿ ಬೈಪಡಿತ್ತಾಯ ಆಲೆಟ್ಟಿ,
ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಕುಡೆಕಲ್ಲು ಮಹಮ್ಮಾಯಿ ದೇವಸ್ಥಾನದ ಜೀ.ಸ.ಅಧ್ಯಕ್ಷ ವಾಸುದೇವ ಗೌಡ ಕುಡೆಕಲ್ಲು, ದೇವಸ್ಥಾನದ ವ್ಯ.ಸ.ಸದಸ್ಯರಾದ ಸತೀಶ್ ಕುಂಭಕ್ಕೋಡು, ಜಗದೀಶ್ ಸರಳಿಕುಂಜ, ಅಚ್ಚುತ ಮಣಿಯಾಣಿ ಆಲೆಟ್ಟಿ, ಶ್ರೀಮತಿ ನಳಿನಿ ನಾರಾಯಣ ರೈ ಆಲೆಟ್ಟಿ, ಶ್ರೀಮತಿ ಮಮತಾ ಮುಕುಂದ ನಾರ್ಕೋಡು, ಒತ್ತೆಕೋಲ ಸಮಿತಿ ಅಧ್ಯಕ್ಷ ಸುಧಾಕರ ಆಲೆಟ್ಟಿ, ಸೇ.ಸ.ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಗೋವಿಂದ ಭಟ್ ಎಲಿಕ್ಕಳ, ಪುರುಷೋತ್ತಮ ದೋಣಿಮೂಲೆ, ಪವಿತ್ರನ್ ಗುಂಡ್ಯ, ನಾರಾಯಣ ರೈ ಆಲೆಟ್ಟಿ, ಭಜನಾ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ, ಸಂಚಾಲಕ ಪ್ರವೀಣ್ ಆಲೆಟ್ಟಿ,
ಮಲ್ಲೇಶ್ ಕುಡೆಕಲ್ಲು ಮತ್ತಿತರರು ಉಪಸ್ಥಿತರಿದ್ದರು. ರಾಮಚಂದ್ರ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.